ಕರ್ನಾಟಕ

karnataka

ETV Bharat / bharat

ಮದ್ಯದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ: ವಿನೋದ್​ ಕಾಂಬ್ಳಿ ಬಂಧನ, ಬಿಡುಗಡೆ - ಕುಡಿದ ವಾಹನ ಓಡಿಸಿದ ಆರೋಪದಲ್ಲಿ ವಿನೋದ್​ ಕಾಂಬ್ಳೆ ಬಂಧನ

ಕುಡಿದ ಮತ್ತಿನಲ್ಲಿದ್ದ ವಿನೋದ್ ಕಾಂಬ್ಳಿ ಬಾಂದ್ರಾ ಸೊಸೈಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

Vinod Kambli
ವಿನೋದ್​ ಕಾಂಬ್ಳೆ

By

Published : Feb 28, 2022, 8:38 AM IST

ಮುಂಬೈ:ಕುಡಿದು ಕಾರು ಚಲಾಯಿಸಿದ್ದಲ್ಲದೇ ಇನ್ನೊಂದು ಕಾರಿಗೆ ಕಾರಿಗೆ ಡಿಕ್ಕಿ ಹೊಡೆದ ದೂರಿನ ಮೇರೆಗೆ ಭಾರತದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಾಂದ್ರಾ ಸೊಸೈಟಿಯಲ್ಲಿ ಹೋಗುತ್ತಿದ್ದ ಕಾರಿಗೆ ವಿನೋದ್ ಕಾಂಬ್ಳಿ ಕುಡಿದ ಮತ್ತಿನಲ್ಲಿ ತನ್ನ ಕಾರನ್ನು ಗುದ್ದಿದ್ದಾರೆ. ಈ ಬಗ್ಗೆ ಬಾಂದ್ರಾದ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಬಳಿಕ ಮುಂಬೈ ಪೊಲೀಸರು ಕಾಂಬ್ಳಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಐಪಿಸಿ ಸೆಕ್ಷನ್​ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದಾದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಜಾಮೀನು ಪಡೆದು ಬಿಡುಗಡೆಯಾದ ಕಾಂಬ್ಳಿ ಬಾಂದ್ರಾದಲ್ಲಿನ ಕಾಂಪ್ಲೆಕ್ಸ್‌ನ ವಾಚ್‌ಮ್ಯಾನ್ ಮತ್ತು ಕೆಲವು ನಿವಾಸಿಗಳೊಂದಿಗೆ ಘಟನೆಗೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದ್ದಾರೆ ಎಂದು ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ:ರಷ್ಯಾ ವಿರುದ್ಧ ಹೋರಾಡಲು ಗನ್‌ ಹಿಡಿದ ಉಕ್ರೇನ್ ಸುಂದರಿ

ABOUT THE AUTHOR

...view details