ಕರ್ನಾಟಕ

karnataka

ETV Bharat / bharat

'ಕೊರೊನಾ ವೈರಸ್​ ಒಂದು ಜೀವಿ, ಅದಕ್ಕೂ ಬದುಕುವ ಹಕ್ಕಿದೆ' ಎಂದ ಮಾಜಿ ಸಿಎಂ ರಾವತ್​​ - ಅಸಂಬದ್ಧ ಹೇಳಿಕೆ ನೀಡಿದ ರಾವತ್​

ಡೆಡ್ಲಿ ವೈರಸ್ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದ್ದು, ಅದರ ಹತೋಟಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಕ್ರಮ ಕೈಗೊಂಡಿವೆ. ಇದರ ಮಧ್ಯೆ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಅಸಂಬದ್ಧ ಹೇಳಿಕೆವೊಂದನ್ನ ನೀಡಿದ್ದಾರೆ.

former cm trivendra singh rawat
former cm trivendra singh rawat

By

Published : May 13, 2021, 3:28 PM IST

ಡೆಹ್ರಾಡೂನ್​(ಉತ್ತರಾಖಂಡ):ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್​ನಿಂದ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದು ತೊಲಗಿದರೆ ಸಾಕು ಎಂದು ಎಲ್ಲರೂ ಜಪಿಸುತ್ತಿರುವ ಈ ಸಂದರ್ಭದಲ್ಲಿ ಉತ್ತರಾಖಂಡ ಮಾಜಿ ಸಿಎಂ ಅಸಂಬದ್ಧ ಹೇಳಿಕೆವೊಂದನ್ನ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಈ ರೀತಿಯ ವಿವಾದಿತ ಹೇಳಿಕೆ ನೀಡಿದ್ದು, ಕೊರೊನಾ ವೈರಸ್ ಕೂಡ ಒಂದು ಜೀವಿ. ಅದಕ್ಕೂ ಬದುಕುವ ಹಕ್ಕಿದೆ ಎಂದಿದ್ದಾರೆ.

ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದೇನು?

ಕೊರೊನಾ ವೈರಸ್ ಕೂಡ ನಮ್ಮ ರೀತಿ ಒಂದು ಜೀವಿ. ನಾವು ಬದುಕಲು ಬಯಸುವ ಹಾಗೇ ಅದೂ ಕೂಡ ಬದುಕಲು ಬಯಸುತ್ತದೆ. ನಾವು ಅದರ ಹಿಂದೆ ಬಿದ್ದಿರುವ ಕಾರಣ ತನ್ನ ಸ್ವರೂಪ ಬದಲಾಯಿಸುತ್ತಿದೆ. ಅದಕ್ಕೂ ಬದುಕುವ ಎಲ್ಲ ಹಕ್ಕಿದೆ ಎಂದಿದ್ದಾರೆ.

ಇದನ್ನೂ ಓದಿ: ನಾಳೆ ರೈತರ ಖಾತೆಗೆ 8ನೇ ಕಂತಿನ ಪಿಎಂ ಕಿಸಾನ್ ಯೋಜನೆ ಮೊತ್ತ.. ಅನ್ನದಾತರೊಂದಿಗೆ ನಮೋ ಸಂವಾದ

ಈ ಹಿಂದೆ ಸಹ ಹಸುವಿನ ಬಗ್ಗೆ ವಿಚಿತ್ರ ಹೇಳಿಕೆ ನೀಡಿ ರಾವತ್ ಟ್ರೋಲ್​ಗೊಳಗಾಗಿದ್ದರು. ಆಮ್ಲಜನಕವನ್ನೇ ಉಸಿರಾಡಿ, ಆಮ್ಲಜನಕವನ್ನೇ ಹೊರಹಾಕುವ ಏಕೈಕ ಪ್ರಾಣಿ ಹಸು. ಅದರ ಮೈ ಮಸಾಜ್ ಮಾಡುವುದರಿಂದ ಉಸಿರಾಟದ ಸಮಸ್ಯೆ ಮಾಯವಾಗುತ್ತದೆ ಎಂದಿದ್ದರು.

ABOUT THE AUTHOR

...view details