ಪಂಜಾಬ್: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದಿಂದ ನೊಂದಿರುವ ಪಂಜಾಬ್ನ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಹಿಂತಿರುಗಿಸಿದ ಪಂಜಾಬ್ ಮಾಜಿ ಸಿಎಂ
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಕ ಹಾಗೂ ಅವರ ಮೇಲೆ ನಡೆಸಿದ ಲಾಠಿ ಪ್ರಹಾರವನ್ನು ಖಂಡಿಸುವ ಸಲುವಾಗಿ ಪಂಜಾಬ್ನ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.
ಪಂಜಾಬ್ನ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್
'ರೈತರ ಮೇಲೆ ನಡೆದ ದೌರ್ಜನ್ಯದಿಂದ ಬೇಸತ್ತಿದ್ದೇನೆ. ನಾನು ಈ ಸ್ಥಾನದಲ್ಲಿರಲು ರೈತರು ಕಾರಣ. ಹೀಗಾಗಿ ಅವರಿಗೆ ಗೌರವ ನೀಡದಿದ್ದರೆ ನನಗೆ ಈ ಪ್ರಶಸ್ತಿ ಅವಶ್ಯಕವಲ್ಲ' ಎಂದು ಹೇಳಿದ್ದಾರೆ.
'ನಾನು ತುಂಬಾ ಬಡವ. ರೈತರ ಹೋರಾಟಕ್ಕೆ ಒಗ್ಗಟ್ಟು ವ್ಯಕ್ತಪಡಿಸಲು ನನ್ನಲ್ಲಿ ತ್ಯಾಗ ಮಾಡಲು ಬೇರೆ ಏನೂ ಇಲ್ಲ' ಎಂದು ಬಾದಲ್ ತಿಳಿಸಿದ್ದಾರೆ.