ಕರ್ನಾಟಕ

karnataka

ETV Bharat / bharat

ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಇನ್ನಿಲ್ಲ.. - ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ

ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಬುಧವಾರ ಕೊನೆಯುಸಿರೆಳೆದಿದ್ದಾರೆ.

Keshub Mahindra passes away
ಕೇಶುಬ್ ಮಹೀಂದ್ರಾ ಇನ್ನಿಲ್ಲ

By

Published : Apr 12, 2023, 1:28 PM IST

ನವದೆಹಲಿ: ಕೈಗಾರಿಕಾ ಸಮೂಹ ಸಂಸ್ಥೆಯಾದ ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ (99) ಬುಧವಾರ ನಿಧನರಾದರು. ಇನ್‌ಸ್ಪೇಸ್‌ (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ) ಅಧ್ಯಕ್ಷ ಪವನ್ ಕೆ ಗೋಯೆಂಕಾ ಅವರು ಈ ವಿಷಯ ಖಚಿತಪಡಿಸಿದ್ದು, ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

99 ವರ್ಷ ವಯಸ್ಸಿನ ಕೇಶುಬ್ ಮಹೀಂದ್ರಾ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಸೋದರಳಿಯ ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮತ್ತು ಕುಟುಂಬ ಸದಸ್ಯರನ್ನು ಇವರು ಅಗಲಿದ್ದಾರೆ. "ಕೈಗಾರಿಕಾ ಜಗತ್ತು ಇಂದು ಅತ್ಯಂತ ಎತ್ತರದ ವ್ಯಕ್ತಿಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಕೇಶುಬ್ ಮಹೀಂದ್ರಾ ಅವರಿಗೆ ಸರಿಸಾಟಿಯಾದ ವ್ಯಕ್ತಿ ಇಲ್ಲ. ನಾನು ಯಾವಾಗಲೂ ಅವರೊಂದಿಗೆ ಭೇಟಿಗೆ ಎದುರು ನೋಡುತ್ತಿದ್ದೆ. ಅವರಿಂದ ವ್ಯಾಪಾರ, ಅರ್ಥಶಾಸ್ತ್ರ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಸ್ಫೂರ್ತಿ ಪಡೆದಿದ್ದೇನೆ. ಓಂ ಶಾಂತಿ" ಎಂದು ಗೋಯೆಂಕಾ ಟ್ವೀಟ್ ಮಾಡಿದ್ದಾರೆ.

1923ರ ಅಕ್ಟೋಬರ್ 9ರಂದು ಶಿಮ್ಲಾದಲ್ಲಿ ಕೇಶುಬ್ ಮಹೀಂದ್ರಾ ಜನಿಸಿದ್ದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರು. ತರುವಾಯ 1947ರಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್‌ಗೆ ಸೇರಿದ್ದರು. 1963ರಲ್ಲಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಅಲ್ಲಿಂದ 2012ರವರೆಗೆ ಸುಮಾರು ಐದು ದಶಕಗಳ ಕಾಲ ಅಧ್ಯಕ್ಷರಾಗಿ ಕೇಶುಬ್ ಮಹೀಂದ್ರಾ ಸೇವೆ ಸಲ್ಲಿಸಿದ್ದರು.

ಈ ಅವಧಿಯಲ್ಲ ಮಹೀಂದ್ರಾ ಗ್ರೂಪ್ ಆಟೋಮೊಬೈಲ್‌ಗಳನ್ನು ಒಳಗೊಂಡಿರುವ ಪ್ರಮುಖ ಸಂಘಟಿತ ಸಂಸ್ಥೆಯಾಗಿ ಮಾರ್ಪಟ್ಟಿತ್ತು. ವಿಲ್ಲಿಸ್ ಜೀಪ್‌ಗಳು, ಎಂಜಿನಿಯರಿಂಗ್, ಕೃಷಿ ಉಪಕರಣಗಳು, ಶಿಕ್ಷಣ, ಏರೋಸ್ಪೇಸ್, ಐಟಿ, ವಸತಿ, ರಿಯಾಲ್ಟಿ, ಹಣಕಾಸು ವಿಭಾಗಗಳಿಗೆ ಮಹೀಂದ್ರಾ ಗ್ರೂಪ್​ ವಿಸ್ತರಿಸಿತ್ತು. ಕೇಶುಬ್ ಮಹೀಂದ್ರಾ ವಿವಿಧ ಸರ್ಕಾರಗಳೊಂದಿಗೆ ವಿವಿಧ ಉನ್ನತ ಮಟ್ಟದ ಸರ್ಕಾರಿ ಸಮಿತಿಗಳು ಮತ್ತು ಪ್ಯಾನೆಲ್‌ಗಳಲ್ಲಿ ಕೆಲಸ ಮಾಡಿದ್ದರು. 2004-2010ರವರೆಗೆ ಪ್ರಧಾನ ಮಂತ್ರಿ ವ್ಯಾಪಾರ ಮತ್ತು ಉದ್ಯಮದ ಮಂಡಳಿಯಲ್ಲಿದ್ದರು.

ಇದನ್ನೂ ಓದಿ:ನಾನು ಎಂದಿಗೂ ಜಗತ್ತಿನ ಅತ್ಯಂತ ಶ್ರೀಮಂತನಾಗುವುದಿಲ್ಲ: ಆನಂದ್ ಮಹೀಂದ್ರಾ

ABOUT THE AUTHOR

...view details