ಕರ್ನಾಟಕ

karnataka

ETV Bharat / bharat

ಬಿಕಾನೇರ್​ ರಾಜಮನೆತನದ ಮಾಜಿ ರಾಜಮಾತೆ ಸುಶೀಲಾ ಕುಮಾರಿ ನಿಧನ

ರಾಜಸ್ಥಾನದ ಬಿಕಾನೇರ್​ ರಾಜಮನೆತನದ ಮಾಜಿ ರಾಜಮಾತೆ ಸುಶೀಲಾ ಕುಮಾರಿ ನಿಧನರಾಗಿದ್ದು, ನಾಳೆ ಅಂತಿಮ ವಿಧಿವಿಧಾನಗಳು ನಡೆಯಲಿದೆ.

former-bikaner-rajmata-sushila-kumari-passes-away
ಬಿಕಾನೇರ್​ ರಾಜಮನೆತನದ ಮಾಜಿ ರಾಜಮಾತೆ ಸುಶೀಲಾ ಕುಮಾರಿ ನಿಧನ

By

Published : Mar 11, 2023, 6:01 PM IST

ಬಿಕಾನೇರ್ (ರಾಜಸ್ಥಾನ):ರಾಜಸ್ಥಾನದ ಬಿಕಾನೇರ್​ ರಾಜಮನೆತನದ ಮಾಜಿ ರಾಜಮಾತೆ ಸುಶೀಲಾ ಕುಮಾರಿ (95) ಶನಿವಾರ ವಿಧಿವಶರಾಗಿದ್ದಾರೆ. ಅಂತಾರಾಷ್ಟ್ರೀಯ ಶೂಟರ್ ಮತ್ತು 25 ವರ್ಷಗಳ ಕಾಲ ಸಂಸದರಾಗಿದ್ದ ಮಾಜಿ ಮಹಾರಾಜ ಕರ್ಣಿ ಸಿಂಗ್ ಅವರ ಪತ್ನಿಯಾಗಿರುವ ಸುಶೀಲಾ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಡುಂಗರ್‌ಪುರದ ರಾಜಪ್ರಭುತ್ವದ ರಾಜಕುಮಾರಿಯಾಗಿದ್ದ ಸುಶೀಲಾ ಕುಮಾರಿ ಅವರು, ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮಾಜಿ ಅಧ್ಯಕ್ಷ ರಾಜಾಸಿಂಗ್ ಡುಂಗರ್‌ಪುರ ಅವರ ಸಹೋದರಿಯಾಗಿದ್ದರು. ಭಾನುವಾರ ಮಾಜಿ ರಾಜಮಾತೆಯ ಅಂತಿಮ ವಿಧಿವಿಧಾನಗಳು ನಡೆಯಲಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಜುನಾಗಢದಲ್ಲಿ ಇಡಲಾಗುವುದು ಎಂದು ತಿಳಿದು ಬಂದಿದೆ.

ಧರ್ಮಶ್ರದ್ಧೆಯುಳ್ಳ ಮಹಿಳೆ ಎಂದೇ ಖ್ಯಾತಿ:ಸುಶೀಲಾ ಕುಮಾರಿ ಅವರ ನಿಧನದಿಂದ ಬಿಕಾನೇರ್​ ಮತ್ತು ಡುಂಗರ್‌ಪುರದ ರಾಜಮನೆತನಲ್ಲಿ ದುಃಖ ಆವರಿಸಿದೆ. ಇಡೀ ಬಿಕಾನೇರ್ ರಾಜಮನೆತನವು ಮಾಜಿ ರಾಜಮಾತೆಯ ನಿಧನಕ್ಕೆ ಸಂತಾಪ ಸೂಚಿಸಿದೆ. ಜೊತೆಗೆ ರಾಜಸ್ಥಾನದ ವಿವಿಧ ಭಾಗಗಳ ಜನರು, ಗಣ್ಯರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಶೀಲಾ ಕುಮಾರಿ ಅವರು ಧರ್ಮಶ್ರದ್ಧೆಯುಳ್ಳ ಮಹಿಳೆ ಎಂದೇ ಪರಿಗಣಿಸಲ್ಪಟ್ಟರು. ಧಾರ್ಮಿಕ ಕಾರ್ಯಗಳು ಮತ್ತು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅವರು ಹೆಸರುವಾಸಿಯಾಗಿದ್ದರು. ಅಷ್ಟೇ ಅಲ್ಲ, ಹಲವಾರು ದತ್ತಿ ಕಾರ್ಯಗಳಲ್ಲಿ ಮಾಜಿ ರಾಜಮಾತೆ ತೊಡಗಿಸಿಕೊಂಡಿದ್ದರು.

ಕೆಲ ದಿನಗಳ ಹಿಂದೆ ಆರೋಗ್ಯ ವಿಚಾರಿಸಿದ್ದ ವಸುಂಧರಾ ರಾಜೇ:ಮಾಜಿ ರಾಜಮಾತೆ ಬಿಕಾನೇರ್ ಪೂರ್ವ ಕ್ಷೇತ್ರದ ಶಾಸಕಿ ಸಿದ್ಧಿ ಕುಮಾರಿ ಅವರ ಅಜ್ಜಿ. ಸಿದ್ಧಿ ಕುಮಾರಿ ಅಜ್ಜಿಯ ಬಳಿಯೇ ಇದ್ದು ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಬಿಕಾನೇರ್ ಪ್ರವಾಸ ಕೈಗೊಂಡಾಗ ಮಾಜಿ ರಾಜಮಾತೆ ಸುಶೀಲಾ ಕುಮಾರಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಸಂಸದ ದುಷ್ಯಂತ್ ಸಿಂಗ್ ಜೊತೆಗಿದ್ದರು.

ಸಚಿವರು, ಪ್ರಮುಖರಿಂದ ಸಂತಾಪ: ಸುಶೀಲಾ ಕುಮಾರಿ ಅಗಲಿಕೆಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಶಿಕ್ಷಣ ಸಚಿವ ಬಿ.ಡಿ.ಕಲ್ಲಾ, ಇಂಧನ ಖಾತೆ ರಾಜ್ಯ ಸಚಿವ ಭನ್ವರ್ ಸಿಂಗ್ ಭಾಟಿ ಮತ್ತು ಇತರರು ಸೇರಿದಂತೆ ಹಲವಾರು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಪದ್ಮಾ ಕುಮಾರಿ ನಿಧನ:ಮೂರು ವರ್ಷಗಳ ಹಿಂದೆ ಇದೇ ಬಿಕಾನೇರ್​ ರಾಜಮನೆತನದ ಮಾಜಿ ಮಹಾರಾಣಿ ಪದ್ಮಾ ಕುಮಾರಿ ನಿಧನ ಹೊಂದಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮಾ ಕುಮಾರಿ ಕೊನೆಯುಸಿರೆಳೆದಿದ್ದರು. ಹಿಮಾಚಲ ಪ್ರದೇಶದ ಚಂಬಾ ರಾಜಮನೆತನಕ್ಕೆ ಸೇರಿದ್ದ ಪದ್ಮಾ ಕುಮಾರಿ, ಬಿಕಾನೇರ್​ ರಾಜಮನೆತನದ ಮಹಾರಾಜ ನರೇಂದ್ರ ಸಿಂಗ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಯ ಮಗಳೇ ಸಿದ್ಧಿ ಕುಮಾರಿ ಅವರಾಗಿದ್ದು, ಬಿಜೆಪಿಯ ಹಾಲಿ ಶಾಸಕರಾಗಿದ್ದಾರೆ.

ಇದನ್ನೂ ಓದಿ:ರಾಜಸ್ಥಾನದ ಬಿಕಾನೇರ್​​ ಮಾಜಿ ಮಹಾರಾಣಿ ನಿಧನ...

ABOUT THE AUTHOR

...view details