ನವದೆಹಲಿ: ಬಿಹಾರದ ಮಾಜಿ ಸಿಎಂ, ಹಿಂದೂಸ್ತಾನಿ ಅವಮ್ ಮೋರ್ಚಾದ ಅಧ್ಯಕ್ಷ ಜೀತನ್ ರಾಮ್ ಮಾಂಜಿ ಹಾಗೂ ಅವರ ಪುತ್ರ, ಸಚಿವ ಸಂತೋಷ್ ಮಾಂಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಕೂಡ ಉಪಸ್ಥಿತರಿದ್ದರು.
ಸಭೆಯ ನಂತರ ಮಾತನಾಡಿದ ಮಾಂಜಿ, ಬಿಹಾರದ ರಾಜಕೀಯ, ನ್ಯಾಯಾಂಗ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಕುರಿತು ಚರ್ಚಿಸಲಾಗಿದೆ. ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿತಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೆವು. ಹಾಗಾಗಿ ಮೋದಿಯವರು ಸಭೆ ನಡೆಸುವಂತೆ ಬಿಜೆಪಿ ಮುಖಂಡರಿಗೆ ಸೂಚಿಸಿದ್ದರು ಎಂದು ಹೇಳಿದರು.
ಮೂಲಗಳ ಪ್ರಕಾರ, ಬಿಹಾರದ ಎನ್‌ಡಿಎಯಲ್ಲಿ ಸಮನ್ವಯ ಸಮಿತಿ ರಚಿಸಬೇಕು. ಹಿಂದೂಸ್ತಾನಿ ಅವಮ್ ಮೋರ್ಚಾ ಪಕ್ಷದಿಂದ ಮತ್ತೊಬ್ಬ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದು ಮಾಂಜಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಮುಂಬರುವ ಯುಪಿ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಎನ್‌ಡಿಎಯಿಂದ ಕೆಲವು ಸ್ಥಾನಗಳನ್ನು ನೀಡಬೇಕು ಅಂತಾನೂ ಪಟ್ಟು ಹಿಡಿದಿದ್ದಾರೆ.