ನವದೆಹಲಿ :ಅಸ್ಸೋಂಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ರೂಪಿನ್ ಬೋರಾ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಾಲ್ಕು ದಶಕಕ್ಕೂ ಅಧಿಕ ನಂಟನ್ನು ಕಡೆದುಕೊಂಡು ಅವರು ರವಿವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿಗೆ ಸೇರಿದ್ದಾರೆ. ಕಾಂಗ್ರೆಸ್ಗೆ ತಾವು ರಾಜೀನಾಮೆ ನೀಡುವುದಕ್ಕೆ ಪಕ್ಷದಲ್ಲಿನ ಒಳ ಗುದ್ದಾಟವೇ ಕಾರಣ. ಇದರಿಂದಲೇ ನಾನು ಪಕ್ಷ ಬಿಡುತ್ತಿದ್ದೇನೆ. ಅಲ್ಲದೇ, ಅಸ್ಸೋಂ ಹಿರಿಯ ಮುಖಂಡರು ಬಿಜೆಪಿ ಸರ್ಕಾರ, ಪ್ರಮುಖವಾಗಿ ಮುಖ್ಯಮಂತ್ರಿಯೊಂದಿಗೆ ರಹಸ್ಯ ಒಪ್ಪಂದ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.