ನವದೆಹಲಿ:ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯಲ್ಲಿ ನಿನ್ನೆ ನಡೆದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ತನಿಖೆ ನಡೆಸಲು ಭಾರತೀಯ ಸೇನೆಯು ತನಿಖಾ ಸಮಿತಿಯನ್ನು (Court Of Inquiry) ನೇಮಿಸಿದೆ. ತಾಂತ್ರಿಕ ಅಥವಾ ಯಾಂತ್ರಿಕ ವೈಫಲ್ಯ ಸೂಚಿಸಿ ಹೆಲಿಕಾಪ್ಟರ್ನಿಂದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೆ ಬಂದ 'ಮೇ ಡೇ' ಕರೆಯ ಮೇಲೆ ಪ್ರಮುಖವಾಗಿ ತನಿಖೆ ನಡೆಯಲಿದೆ.
ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ರಕ್ಷಣಾ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ವರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಶುಕ್ರವಾರ ಪತ್ತೆ ಮಾಡಲಾಗಿದ್ದು, ಐದನೇ ಮೃತದೇಹವನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ವ್ಯಾಪಕವಾದ ಹಾರಾಟದ ಅನುಭವವನ್ನು ಹೊಂದಿರುವ ಪೈಲಟ್‌ಗಳೊಂದಿಗೆ ಹಾರಾಟ ನಡೆಸಲು ಮಾತ್ರ ಈಗಿನ ಹವಾಮಾನ ಪರಿಸ್ಥಿತಿ ಸೂಕ್ತವಾಗಿದೆ ಎಂದು ವರದಿಯಾಗಿದೆ.