ಕರ್ನಾಟಕ

karnataka

ETV Bharat / bharat

ಹರಿದ್ವಾರ: ಇಂದು ಕುಂಭಮೇಳಕ್ಕೆ ಔಪಚಾರಿಕ ಚಾಲನೆ

ಇಂದಿನಿಂದ ಹರಿದ್ವಾರ ಕುಂಭಮೇಳಕ್ಕೆ ಔಪಚಾರಿಕ ಚಾಲನೆ ಸಿಗಲಿದ್ದು, ಮಾ.11 ರಂದು ಗಂಗಾ ತೀರದಲ್ಲಿ ಮೊದಲ ಶಾಹಿ ಸ್ನಾನ ನಡೆದಿದೆ.

Formal drive to Kumbhamela today
ಇಂದು ಕುಂಭಮೇಳಕ್ಕೆ ಔಪಚಾರಿಕ ಚಾಲನೆ

By

Published : Apr 1, 2021, 7:51 AM IST

ಹರಿದ್ವಾರ(ಉತ್ತರಾಖಂಡ):ಹರಿದ್ವಾರ ಕುಂಭಮೇಳಕ್ಕೆ ಇಂದು ಔಪಚಾರಿಕ ಚಾಲನೆ ಸಿಗಲಿದೆ. ಕುಂಭಮೇಳಕ್ಕೂ ಪೂರ್ವದಲ್ಲಿ ಮಾ.11 ರಂದು ಗಂಗಾ ತೀರದಲ್ಲಿ ಮೊದಲ ಶಾಹಿ ಸ್ನಾನ ನಡೆದಿತ್ತು.

ಇಂದು ಕುಂಭಮೇಳಕ್ಕೆ ಔಪಚಾರಿಕ ಚಾಲನೆ

ಮಹಾದೇವ ಶಿವ ಗಂಗೆಯನ್ನ ಧರೆಗೆ ಇಳಿಸಿದ್ದ. ಇದೇ ನಿಮಿತ್ತ ಮಹಾಶಿವರಾತ್ರಿಯಂದು ಗಂಗಾ ಸ್ನಾನ ಮಾಡುವುದು ತುಂಬಾ ಪವಿತ್ರ ಎಂದು ಭಕ್ತರು ನಂಬುತ್ತಾರೆ.

ಎರಡನೇ ಶಾಹಿ ಸ್ನಾನ: ಹರಿದ್ವಾರ ಕುಂಭದ ಎರಡನೇ ಶಾಹಿ ಸ್ನಾನವು ಸೋಮವತಿ ಅಮಾವಾಸ್ಯೆಯ ದಿನದಂದು ಅಂದರೆ ಏಪ್ರಿಲ್ 12ರ ಸೋಮವಾರ ನಡೆಯಲಿದೆ. ಮೊದಲ ಸ್ನಾನದ 1 ತಿಂಗಳ ನಂತರ ಈ ಸ್ನಾನ ನಡೆಯುವುದು ವಿಶೇಷ. ಅಮಾವಾಸ್ಯೆಯ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ನಂತರ ದಾನ ಮಾಡುವುದು ಈ ದಿನದ ವಿಶೇಷ ಎಂದು ಹೇಳಲಾಗುತ್ತಿದೆ. ಸೋಮವಾರ ಬರುವ ಅಮಾವಾಸ್ಯೆಯನ್ನು ಸೋಮವತಿ ಅಮಾವಾಸ್ಯ ಎಂದೂ ಕರೆಯಲಾಗುತ್ತದೆ.

ಮೂರನೇ ಶಾಹಿ ಸ್ನಾನ: 14 ಏಪ್ರಿಲ್ ಮೇಷ ಸಂಕ್ರಾಂತಿ ಮತ್ತು ಬೈಸಾಖಿ ಮೇಷ ರಾಶಿಯ ಸಂಕ್ರಾಂತಿಯ ಸಂದರ್ಭದಲ್ಲಿ ಹರಿದ್ವಾರ ಕುಂಭದ ಮೂರನೇ ಶಾಹಿ ಸ್ನಾನ ಏಪ್ರಿಲ್ 14 ರಂದು ನಡೆಯಲಿದೆ. ಈ ದಿನ ಬೈಸಾಖಿ ಕೂಡ ಇದ್ದಾರೆ. ಮೇಷ ರಾಶಿಯ ಸಂಕ್ರಾಂತಿಯ ದಿನದಂದು ಗಂಗೆಯ ನೀರು ಮಕರಂದವಾಗುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ದಿನ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ಪಾಪಗಳು ತೊಳೆಯುತ್ತವೆಯಂತೆ.

ನಾಲ್ಕನೇ ಶಾಹಿ ಸ್ನಾನ:ಚೈತ್ರ ಪೂರ್ಣಿಮಾ ಏಪ್ರಿಲ್ 27ರಂಉ ಹರಿದ್ವಾರ ಕುಂಭದ ನಾಲ್ಕನೇ ಮತ್ತು ಕೊನೆಯ ರಾಯಲ್ ಸ್ನಾನವು ಚೈತ್ರ ಮಾಸದಲ್ಲಿ ಹುಣ್ಣಿಮೆಯ ದಿನದಂದು ನಡೆಯಲಿದೆ. ಇದು ಶಾಹಿ ಸ್ನಾನದ ಪ್ರಮುಖ ದಿನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿನವನ್ನು ಅಮೃತ ಯೋಗ ಎಂದೂ ಕರೆಯಲಾಗುತ್ತದೆ.

ಓದಿ:ಪಶ್ಚಿಮ ಬಂಗಾಳ, ಅಸ್ಸೋಂನಲ್ಲಿ 2ನೇ ಹಂತದ ಮತದಾನ ಆರಂಭ

ABOUT THE AUTHOR

...view details