ಚಂಡೀಗಢ(ಪಂಜಾಬ್): ಅರಣ್ಯ ಇಲಾಖೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಸೋಮವಾರ ವನ್ಯಜೀವಿಗಳ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಪ್ರವೀಣ್ ಕುಮಾರ್ ಅವರನ್ನು ಬಂಧಿಸಿದೆ.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪ್ರವೀಣ್ ಕುಮಾರ್, ಖೈರ್ ಮರಗಳನ್ನು ಕಡಿಯುವುದು, ವಾಣಿಜ್ಯ ಸಂಸ್ಥೆಗಳಿಗೆ ಎನ್‌ಒಸಿ ನೀಡುವಿಕೆ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಟ್ರೀ ಗಾರ್ಡ್‌ಗಳನ್ನು ಖರೀದಿಸಲು ಸಂಘಟಿತ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಅರಣ್ಯ ಇಲಾಖೆಯಲ್ಲಿ ಎನ್‌ಒಸಿ ನೀಡಲು ಪ್ರವೀಣ್‌ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ಪ್ರವೀಣ್ ಕುಮಾರ್ ಅವರು ಮಾಜಿ ಅರಣ್ಯ ಸಚಿವ ಸಂಗತ್ ಸಿಂಗ್ ಗಿಲ್ಜಿಯಾ ಅವರೊಂದಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೇ ಅರಣ್ಯ ಇಲಾಖೆಯಲ್ಲಿ ನಡೆದ ವರ್ಗಾವಣೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನಲಾಗ್ತಿದೆ.
ಈ ಹಿನ್ನೆಲೆ ಐಪಿಸಿ ಸೆಕ್ಷನ್ 409 (ಸಾರ್ವಜನಿಕ ಸೇವಕರಿಂದ ಅಪರಾಧ ನಂಬಿಕೆ ಉಲ್ಲಂಘನೆ), 420 (ವಂಚನೆ), 465, 467, 468 (ಎಲ್ಲಾ ನಕಲಿ), 471 ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಸೆಕ್ಷನ್ 7, 7 (ಎ), 13 ಅಡಿಯಲ್ಲಿ ಪ್ರಕರಣ ಭ್ರಷ್ಟಾಚಾರ ತಡೆ ಕಾಯ್ದೆಯ (1) ಮತ್ತು 13 (2)ಪ್ರಕರಣ ದಾಖಲಿಸಲಾಗಿದೆ.