ಕರ್ನಾಟಕ

karnataka

ETV Bharat / bharat

ಅಬ್ಬಾ ಎಂಥಾ ಡೇಂಜರಸ್​... ಹಾವುಗಳಿಗೆ ಕಿಸ್ ಮಾಡಿ, ರೀಲ್ಸ್ ಮಾಡುತ್ತಿದ್ದ ಯುವಕನ ಬಂಧನ

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಹಾವಿಗೆ ಮುತ್ತಿಟ್ಟು ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಯುವಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

forest-department-take-action-against-youth-making-reels-with-snake
ಹಾವುಗಳಿಗೆ ಕಿಸ್ ಮಾಡಿ, ರೀಲ್ಸ್ ಮಾಡುತ್ತಿದ್ದ ಯುವಕನ ಬಂಧನ

By

Published : Mar 29, 2022, 12:42 PM IST

Updated : Mar 29, 2022, 5:55 PM IST

ಸಾಂಗ್ಲಿ(ಮಹಾರಾಷ್ಟ್ರ):ಹಾವಿನೊಂದಿಗೆ ಚೆಲ್ಲಾಟ ಒಳ್ಳೆಯದಲ್ಲ ಎಂದು ಗುರು ಹಿರಿಯರು ಆಗಾಗ ಹೇಳುವ ಮಾತು. ಆದರೀಗ ಚೆಲ್ಲಾಟವಾಡಿದಾಗ ಹಾವುಗಳು ಯಾವುದೇ ಹಾನಿ ಮಾಡದಿದ್ದರೂ, ಕಾನೂನು ಕಠಿಣ ಕ್ರಮ ಕೈಗೊಳ್ಳುವುದಂತೂ ಗ್ಯಾರೆಂಟಿ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಯುವಕನೊಬ್ಬ ಹಾವಿನೊಂದಿಗೆ 'ಚೆಲ್ಲಾಟ'ವಾಡಿ, ಅರಣ್ಯ ಅಧಿಕಾರಿಗಳಿಂದ ಈಗ ಬಂಧಿಸಲ್ಪಟ್ಟಿದ್ದಾನೆ.

ಸಾಂಗ್ಲಿಯ ಬಾವ್ಚಿ ಪ್ರದೇಶದಲ್ಲಿ ಪ್ರದೀಪ್ ಅಡ್ಸುಲೆ ಎಂಬ 22 ವರ್ಷದ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ಹಾವಿಗೆ ಮುತ್ತು ಕೊಟ್ಟಿರುವ ರೋಮಾಂಚನಕಾರಿ ವಿಡಿಯೋವೊಂದನ್ನ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಹಾವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಕಾರಣದಿಂದ ಬಂಧಿಸಿ, ಕ್ರಮ ಕೈಗೊಳ್ಳಲಾಗಿದೆ.

ಹಾವುಗಳಿಗೆ ಕಿಸ್ ಮಾಡಿ, ರೀಲ್ಸ್ ಮಾಡುತ್ತಿದ್ದ ಯುವಕನ ಬಂಧನ

ಪ್ರದೀಪ್ ಹಾವುಗಳನ್ನು ಹಿಡಿದು, ವಿವಿಧ ರೀತಿಯ ರೀಲ್​ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ. ಈಗ ಆ ವಿಡಿಯೋಗಳೇ ಪ್ರದೀಪ್​ಗೆ ಕಂಟಕವಾಗಿವೆ.

ಇದನ್ನೂ ಓದಿ:ಸೋಷಿಯಲ್​​​ ಮೀಡಿಯಾದಲ್ಲಿ ಸದ್ದು ಮಾಡಿದ್ದ 25- 45ರ ವಧು - ವರರ ವಿವಾಹ: ಶಂಕರಪ್ಪ ಆತ್ಮಹತ್ಯೆ..

Last Updated : Mar 29, 2022, 5:55 PM IST

ABOUT THE AUTHOR

...view details