ಉದಾಲಾ/ಒಡಿಶಾ:ಮಯೂರ್ಭಂಜ್ ಜಿಲ್ಲೆಯ ಅಂಗರಪಾಡ ಗ್ರಾಮದಲ್ಲಿ ಆನೆ ದಂತ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉದಾಲಾ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಆನೆ ದಂತ ಕಳ್ಳ ಸಾಗಣೆ: ಒಡಿಶಾದಲ್ಲಿ ಇಬ್ಬರ ಬಂಧನ - ಇಬ್ಬರ ಬಂಧನ
ಆನೆ ದಂತ ಕಳ್ಳಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉದಾಲಾ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 45 ಕೆಜಿ ತೂಕದ 7 ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.
ಆನೆ ದಂತ ಕಳ್ಳ ಸಾಗಣೆ: ಒಡಿಶಾದಲ್ಲಿ ಇಬ್ಬರ ಬಂಧನ
ಖಚಿತ ಮಾಹಿತಿ ಮೇರೆಗೆ ಗ್ರಾಹಕರಂತೆ ವೇಷ ಧರಿಸಿ ದಾಳಿ ಮಾಡಿದ ಅರಣ್ಯಾಧಿಕಾರಿಗಳು ಇಬ್ಬರು ಆನೆದಂತ ಕಳ್ಳಸಾಗಣೆದಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 45 ಕೆಜಿ ತೂಕದ 7 ಆನೆ ದಂತಗಳನ್ನು ವಶಪಡಿಸಿಕೊಂಡಿರುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.