ನವದೆಹಲಿ: ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ಮತ್ತು ಯುನೈಟೆಡ್ ಕಿಂಗ್‌ಡಂನ ಮಹಿಳಾ ಮತ್ತು ಸಮಾನತೆಗಳ ಸಚಿವೆ ಎಲಿಜಬೆತ್ ಟ್ರಸ್ ಅವರು ಮಾರ್ಚ್ 31ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಎಂಇಎ ತಿಳಿಸಿದೆ. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಟ್ರಸ್ ಸಮಾಲೋಚನೆ ನಡೆಸಲಿದ್ದಾರೆ.
ಇಂಡಿಯಾ-ಯುಕೆ ಸ್ಟ್ರಾಟೆಜಿಕ್ ಫ್ಯೂಚರ್ಸ್ ಫೋರಮ್‌ನ ಉದ್ಘಾಟನಾ ಆವೃತ್ತಿಯಲ್ಲಿ ಇವರು ಬಾಗವಹಿಸಲಿದ್ದಾರೆ. 4 ಮೇ, 2021ರಂದು ಉಭಯ ರಾಷ್ಟ್ರಗಳ ಪ್ರಧಾನಮಂತ್ರಿಗಳ ನಡುವೆ ನಡೆದ ಭಾರತ-ಯುಕೆ ವರ್ಚುವಲ್ ಶೃಂಗಸಭೆಯ ಸಂದರ್ಭದಲ್ಲಿ ಭಾರತ-ಯುಕೆ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಗಿತ್ತು.