ನವದೆಹಲಿ:ಬಲವಂತದ ಧಾರ್ಮಿಕ ಮತಾಂತರ ನಿಷೇಧಕ್ಕೆ ಹಿಂದೂ ಅರ್ಚಕರೊಬ್ಬರು ಸುಪ್ರೀಂ ಕೋರ್ಟ್ನಲ್ಲಿ ಹೊಸ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ಧರ್ಮದ ಗುರು ಸ್ವಾಮಿ ಜೀತೆಂದ್ರನಂದ್ ಸರಸ್ವತೆ ಅರ್ಜಿ ಸಲ್ಲಿಸಿದವರು. ಸಂವಿಧಾನದ ವಿಧಿ 25ರಲ್ಲಿ ಧಾರ್ಮಿಕ ಹಕ್ಕು ನೀಡಲಾಗಿದೆ ಹೊರತು ಮತಾಂತರದ ಹಕ್ಕು ಅಲ್ಲ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಆರ್ಧಿಕ ದುರ್ಬಲವರ್ಗದವರನ್ನು ಬಲವಂತವಾಗಿ ಬಹುತೇಕ ಮಸೀದಿ ಮತ್ತು ಚರ್ಚ್ಗಳಲ್ಲಿ ಮತಾಂತರ ನಡೆಸಲಾಗುತ್ತಿದೆ. ಧಾರ್ಮಿಕ ಮತಾಂತರ ಮಿಷನರಿಗಳ ಪ್ರಮುಖ ಗುರಿ ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಸಾಮಾಜಿಕ, ಆರ್ಥಿಕವಾಗಿ, ದುರ್ಬಲವಾಗಿರುವ ಸಾಮೂಹಿಕವಾಗಿ ಮತಾಂತರ ನಡೆಸಲಾಗುತ್ತಿದೆ
ಮತಾಂತರಕ್ಕೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಕೋಟ್ಯಂತರ ಜನರನ್ನು ಕೊಂದರು. ಲಕ್ಷಾಂತರ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು. ಲಕ್ಷಾಂತರ ದೇವಾಲಯಗಳು, ಪೂಜಾ ಕೇಂದ್ರಗಳನ್ನು ಧ್ವಂಸ ಮಾಡಿದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಮೂಲ ಧಾರ್ಮಿಕ ಹಕ್ಕನ್ನು ರಕ್ಷಿಸಬಹುದಾಗಿದೆ. ಕೋಮು ಸಾಮರಸ್ಯ ಮತ್ತು ಭಾರತದ ಏಕತೆಗೆ ಸಮಗ್ರತೆ ಧಕ್ಕೆ ತರುವ ಮೂಲಕ ಜೈವಿಕ ಮತ್ತು ನೈತಿಕ ಆಕ್ರಮಣ ನಡೆಯುತ್ತಿದೆ.