ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ನಡುವೆಯೂ ಕೂಡ ಭಾರತದ ಕೆಲವು ವ್ಯಕ್ತಿಗಳ ವಾರ್ಷಿಕ ಆದಾಯದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದ್ದು, ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಳೆದ 14 ವರ್ಷಗಳಿಂದಲೂ ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅಂಬಾನಿ, ಒಟ್ಟು ಸಂಪತ್ತು 7.18 ಲಕ್ಷ ಕೋಟಿ ರೂ. ಆಗಿದೆ.
2021ರ ಸಾಲಿನ ಶ್ರೀಮಂತರ ಲಿಸ್ಟ್ ಫೋರ್ಬ್ಸ್ನಿಂದ ರಿಲೀಸ್ ಆಗಿದ್ದು, 64 ವರ್ಷದ ಅಂಬಾನಿ 2008 ರಿಂದಲೂ ಸತತವಾಗಿ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದು, ಶಿವ ನಾಡರ್ ಮೂರನೇ ಸ್ಥಾನದಲ್ಲಿದ್ದಾರೆ.2021ರ ಫೋರ್ಬ್ಸ್ ವರದಿ ಪ್ರಕಾರ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿನ ಸದಸ್ಯರ ಒಟ್ಟು ಸಂಪತ್ತು 775 ಶತಕೋಟಿ USDಯಷ್ಟಿದೆ.
Forbes 2021ರ ಶ್ರೀಮಂತರ ಲಿಸ್ಟ್ ರಿಲೀಸ್ Forbes 2021ರ ಶ್ರೀಮಂತರ ಲಿಸ್ಟ್ ರಿಲೀಸ್ ಇದನ್ನೂ ಓದಿರಿ:'IPLನೇ ಬನಾದಿ ಜೋಡಿ'.. ಮೈದಾನದಲ್ಲೇ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ ಚಹರ್!
ಪಟ್ಟಿಯಲ್ಲಿನ ಶೇ. 80ರಷ್ಟು ಶ್ರೀಮಂತರು ಕಳೆದ ಸಾಲಿಗಿಂತಲೂ ಈ ಸಲ ತಮ್ಮ ಸಂಪತ್ತಿನಲ್ಲಿ ಏರಿಕೆ ಮಾಡಿಕೊಂಡಿದ್ದು, ಮುಖೇಶ್ ಅಂಬಾನಿಯವರ ನಿವ್ವಳ ಮೌಲ್ಯ ಇದೀಗ 92.7 ಬಿಲಿಯನ್ ಅಮೆರಿಕನ್ ಡಾಲರ್ ಇದೆ.
ಟಾಪ್ 10 ಪಟ್ಟಿಯಲ್ಲಿರುವರ ಒಟ್ಟು ಮೌಲ್ಯ (USD)
- ಮುಖೇಶ್ ಅಂಬಾನಿ 92.7 ಬಿಲಿಯನ್ USD
- ಗೌತಮ್ ಅದಾನಿ 74.8 ಬಿಲಿಯನ್ USD
- ಶಿವ ನಾಡಾರ್ 31 ಬಿಲಿಯನ್ USD
- ರಾಧಾಕಿಶನ್ ದಮಾನಿ 29.4 ಬಿಲಿಯನ್ USD
- ಸೈರಸ್ ಪೂನಾವಾಲಾ 19 ಬಿಲಿಯನ್ USD
- ಲಕ್ಷ್ಮೀ ಮಿಥಲ್ 18.8 ಬಿಲಿಯನ್ USD
- ಸಾವಿತ್ರಿ ಜಿಂದಾಲ್ 18 ಬಿಲಿಯನ್ USD
- ಉದಯ ಕೊಟಕ್ 16.5 ಬಿಲಿಯನ್ USD
- ಪಲ್ಲೊಂಜಿ ಮಿಸ್ತ್ರಿ16.4 ಬಿಲಿಯನ್ USD
- ಕುಮಾರ್ ಬಿರ್ಲಾ 15.8 ಬಿಲಿಯನ್ USD
ಕಳೆದ ಕೆಲ ದಿನಗಳ ಹಿಂದೆ ಹುರೂನ್ ಇಂಡಿಯಾ ಸಿದ್ಧಪಡಿಸಿರುವ ಪಟ್ಟಿವೊಂದರ ಪ್ರಕಾರ, ಭಾರತದಲ್ಲಿ 1,007 ವ್ಯಕ್ತಿಗಳ ಸಂಪತ್ತು 1 ಸಾವಿರ ಕೋಟಿ ರೂ. ಎಂದು ತಿಳಿದು ಬಂದಿತು. ಇದರ ಪ್ರಕಾರ ಕೂಡ ದೇಶದ 119 ನಗರಗಳ 1007 ವ್ಯಕ್ತಿಗಳ ಸಂಪತ್ತು ಒಂದು ಸಾವಿರ ಕೋಟಿ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಎಂದು ತಿಳಿಸಿತ್ತು.