ಕರ್ನಾಟಕ

karnataka

ETV Bharat / bharat

ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದಲ್ಲಿ ರಾಮಮಂದಿರ ಇತಿಹಾಸದ ಕೋರ್ಸ್ ಆರಂಭ - Ram Mandir

ಗುಜರಾತ್ ವಿಶ್ವವಿದ್ಯಾಲಯವು ರಾಮ ಮಂದಿರದ 500 ವರ್ಷಗಳ ಇತಿಹಾಸದ ಕುರಿತು ವಿಶೇಷ ಪ್ರಮಾಣಪತ್ರ ಕೋರ್ಸ್ ಅನ್ನು ಪ್ರಾರಂಭಿಸುತ್ತಿದೆ.

ಗುಜರಾತ್ ವಿಶ್ವವಿದ್ಯಾಲಯ
ಗುಜರಾತ್ ವಿಶ್ವವಿದ್ಯಾಲಯ

By ETV Bharat Karnataka Team

Published : Jan 16, 2024, 7:08 PM IST

ಗಾಂಧಿನಗರ(ಗುಜರಾತ್)​ : ರಾಮ ಮಂದಿರದ ಪ್ರತಿಪ್ಠಾಪನೆಯ ಬಗ್ಗೆ ದೇಶಾದ್ಯಂತ ಜನರಲ್ಲಿ ಉತ್ಸಾಹದ ವಾತಾವರಣವಿದೆ. ಏತನ್ಮಧ್ಯೆ, ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯವು ರಾಮ ಮಂದಿರದ 500 ವರ್ಷಗಳ ಇತಿಹಾಸದ ಕುರಿತು ವಿಶೇಷ ಪ್ರಮಾಣಪತ್ರದ ಕೋರ್ಸ್​ವೊಂದನ್ನು ಪ್ರಾರಂಭಿಸುತ್ತಿದೆ.

ರಾಮಮಂದಿರದ ಇತಿಹಾಸದ ಕುರಿತು ಕೋರ್ಸ್ ಆರಂಭಿಸುತ್ತಿರುವುದು ದೇಶದಲ್ಲಿ ಇದೇ ಮೊದಲು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಾತ್ರವಲ್ಲದೇ 12 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಈ ಕೋರ್ಸ್ ಮಾಡಬಹುದು. ಈ ಕೋರ್ಸ್ ಮಾಡಲು ಯಾವುದೇ ಪದವಿಯ ಅಗತ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಸರ್ಟಿಫಿಕೇಟ್ ಕೋರ್ಸ್ ಮಾಡಿದರೆ ಎರಡು ಶೈಕ್ಷಣಿಕ ಅಂಕಗಳೂ ಸಿಗುತ್ತವೆ.

ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ಉಪಕುಲಪತಿ ಕಿಶೋರ್ ಸಿಂಗ್ ಚಾವ್ಡಾ ಮಾತನಾಡಿ, ರಾಮಜನ್ಮಭೂಮಿ ಹೋರಾಟದ ಇತಿಹಾಸವು 550 ವರ್ಷಗಳಷ್ಟು ಹಳೆಯದಾಗಿದೆ. ನಾವು ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ 30 ಗಂಟೆಗಳ ಅವಧಿಯ ಪ್ರಮಾಣಪತ್ರದ ಕೋರ್ಸ್​ ಅನ್ನು ವಿನ್ಯಾಸಗೊಳಿಸಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಇದಕ್ಕೆ 1100 ರೂ. ಶುಲ್ಕ ನಿಗದಿ ಪಡಿಸಲು ಅನುಮೋದನೆ ನೀಡಲಾಗಿದೆ ಎಂದರು.

10,000 ವರ್ಷಗಳಷ್ಟು ಹಳೆಯದಾದ ಭಾರತೀಯ ನಾಗರಿಕತೆಯ ರಾಮಜನ್ಮಭೂಮಿಯ ಇತಿಹಾಸದ ಕುರಿತು, ಈ ಪೂರ್ಣ ಪ್ರಮಾಣಪತ್ರ ಕೋರ್ಸ್ ಅನ್ನು ನಾವು ಮೊದಲ ಬಾರಿಗೆ ನಡೆಸಲಿದ್ದೇವೆ ಎಂದು ಪ್ರಧಾನಿ ಮೋದಿ ಭಾವಿಸಿದ್ದರು. ಪಠ್ಯಕ್ರಮವು ಬಾಬರಿ ಮಸೀದಿಯಿಂದ ವಿವಾದಿತ ಭಾಗದವರೆಗಿನ 500 ವರ್ಷಗಳ ಇತಿಹಾಸದ ಸಂಪೂರ್ಣ ಪ್ರಯಾಣವಾಗಿದೆ. ಭಗವಾನ್ ಶ್ರೀರಾಮನ ಸಂಪೂರ್ಣ ಪ್ರಯಾಣ ಮತ್ತು ನಂತರ ಸುಪ್ರೀಂ ಕೋರ್ಟ್ ಆದೇಶವನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಈ ಕೋರ್ಸ್ ಆರಂಭದಿಂದ ಜನವರಿ 22ರವರೆಗಿನ ಪ್ರಯಾಣವನ್ನು ಒಳಗೊಂಡಿದೆ. ಇದರಿಂದ ಇಡೀ ಸಮಾಜಕ್ಕೆ ಇತಿಹಾಸದ ರೂಪದಲ್ಲಿ ವಿಷಯಗಳ ಅರಿವಾಗುತ್ತದೆ. 12 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಧ್ಯಯನ ಮಾಡದವರೂ ಸಹ ಈ ಕೋರ್ಸ್ ಅನ್ನು ಪೂರ್ಣಗೊಳಿಸಬಹುದು ಎಂದರು. ಅಲ್ಲದೇ ವಿಶ್ವವಿದ್ಯಾನಿಲಯದೊಂದಿಗೆ 1 ಕೋಟಿ 40 ಲಕ್ಷ ಜನರು ಸಂಬಂಧ ಹೊಂದಿದ್ದಾರೆ. ನಾವು ಅವರನ್ನು ಗುರಿಯಾಗಿಟ್ಟುಕೊಂಡು ಎಲ್ಲರಿಗೂ ತಿಳಿಸಿ, ಎಲ್ಲರಿಗೂ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಸರ್ಕಾರಿ ವಿಶ್ವವಿದ್ಯಾಲಯವಾಗಿರುವುದರಿಂದ, ಇದು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಸರ್ಕಾರದಿಂದ ಅನುಮೋದಿಸಲ್ಪಟ್ಟ ಪ್ರಮಾಣಪತ್ರ ಕೋರ್ಸ್ ಆಗಿರುತ್ತದೆ. ಜೈ ರಾಮ್ ಜನ್ಮಭೂಮಿಯ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಅವರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್​ ಮೂಲಕ ಪಡೆಯುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ :ಅಯೋಧ್ಯೆ: ಶ್ರೀರಾಮ ಪ್ರಾಣ ಪ್ರತಿಷ್ಠೆಯ 7 ದಿನಗಳ ಧಾರ್ಮಿಕ ವಿಧಿ ಇಂದಿನಿಂದ ಆರಂಭ

ABOUT THE AUTHOR

...view details