ಕರ್ನಾಟಕ

karnataka

ETV Bharat / bharat

ಆಡಂಬರ ಬೇಡ ಎಂದು ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ತೇಜಸ್ವಿ - ಮಹಾಘಟ‌ಬಂದನ್​ ಮುಖ್ಯಮಂತ್ರಿ ಅಭ್ಯರ್ಥಿ ತೇಜಶ್ವಿ ಯಾದವ್

ಇಂದು ನನ್ನ ಜನ್ಮದಿನವನ್ನು ಆಡಂಬರದಿಂದ ಆಚರಿಸುವ ಬದಲು ಮತ ಎಣಿಕೆ ದಿನವಾದ ನಾಳೆ ಜಾಗರೂಕರಾಗಿರಿ ಎಂದು ಬಿಹಾರ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಆರ್‌ಜೆಡಿ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.

Tejashwi Yadav
ತೇಜಶ್ವಿ ಯಾದವ್

By

Published : Nov 9, 2020, 1:14 PM IST

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮಹಾಘಟ‌ಬಂದನ್​ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಇಂದು ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ.

'ಆಡಂಬರದಿಂದ ನನ್ನ ಜನ್ಮದಿನ ಆಚರಿಸುವ ಬದಲು, ಮತ ಎಣಿಕೆ ದಿನವಾದ ನಾಳೆ ಜಾಗರೂಕರಾಗಿರಿ. ಮನೆಯಲ್ಲಿಯೇ ಇರಿ, ವೈಯಕ್ತಿಕವಾಗಿ ನನಗೆ ಶುಭಕೋರಲು ಬರುವುದು ಬೇಡ' ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಪಕ್ಷದ ಕಾರ್ಯಕರ್ತರಿಗೆ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್​ ಪೋಲ್)ಯು ತೇಜಸ್ವಿ ಯಾದವ್ ಗೆಲುವಿನ ಮುನ್ಸೂಚನೆ ನೀಡಿದ್ದು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುವುದು ಬೇಡ, ಮತ ಎಣಿಕೆ ದಿನದಂದು ಪ್ರತಿಸ್ಪರ್ಧಿಗಳ ಜೊತೆ ಅತಿರೇಕದಿಂದ ವರ್ತಿಸುವುದು ಬೇಡ ಎಂದು ಆರ್‌ಜೆಡಿ ಎಚ್ಚರಿಕೆ ನೀಡಿದೆ.

ABOUT THE AUTHOR

...view details