ಪೌಷ್ಟಿಕಯುಕ್ತ ಆಹಾರ ಮತ್ತು ಆರೋಗ್ಯಕರ ಭೋಜನ ಉತ್ತಮ ಸ್ತನ್ಯಪಾನದ ಕೀಲಿಕೈ. ನವಜಾತ ಶಿಶುವಿನ ಆಹಾರವು ಸಂಪೂರ್ಣವಾಗಿ ತಾಯಿಯ ಎದೆಹಾಲಿನ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ತಾಯಂದಿರು ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ ಎ ಮತ್ತು ವಿಟಮಿನ್ ಡಿ ನಂತಹ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.
ಗರ್ಭಾವಸ್ಥೆಯಲ್ಲಿ ತ್ಯಜಿಸಬೇಕಾದ ಆಹಾರಗಳ ಪಟ್ಟಿ ಉದ್ದವಾಗಿದೆ. ಆದರೆ, ಅದೃಷ್ಟವಶಾತ್ ಹಾಲುಣಿಸುವ ತಾಯಂದಿರು ಬಹುತೇಕ ಎಲ್ಲವನ್ನೂ ತಿನ್ನಬಹುದು. ಆದರೆ, ಮಗುವಿನ ಬಾಣಂತಿ ಅಥವಾ ಹಾಲುಣಿಸುವ ತಾಯಿ ಕೆಳಗಿನ ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಆಲ್ಕೋಹಾಲ್ ಮತ್ತು ಕೆಫೀನ್ :ಆಲ್ಕೋಹಾಲ್ ಮತ್ತು ಕೆಫೀನ್ ಅಂಶವಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು. ಆಲ್ಕೋಹಾಲ್‌ನಂತಹ ಪಾನೀಯವನ್ನು ಸೇವಿಸಿ 2-3 ಗಂಟೆಗಳು ಕಳೆದರೂ ದೇಹದಲ್ಲಿ ಆ ಅಂಶ ಇರುವುದರಿಂದ ಎದೆ ಹಾಲಿನ ಮೂಲಕ ಮಗುವಿನ ದೇಹ ಸೇರಬಹುದು. ಮತ್ತು ಇದು ಮಗುವಿನ ಬೆಳವಣಿಗೆ ಮತ್ತು ನಿದ್ರೆ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಇನ್ನು, ಕೆಫೀನ್ ಆಲ್ಕೋಹಾಲ್‌ಗಿಂತ ಹೆಚ್ಚು ಸುರಕ್ಷಿತವಾಗಿದ್ದರೂ, ಬಾಣಂತಿಯರು ಕೆಫೀನ್ ಸೇವನೆಯನ್ನು ದಿನಕ್ಕೆ ಸುಮಾರು 300 ಮಿಲಿಗ್ರಾಂಗಳಿಗೆ ಮಿತಿಗೊಳಿಸಬೇಕು.
ಚಾಕೋಲೇಟ್ :ಸ್ವಲ್ಪವೇ ಚಾಕೋಲೇಟ್ ಸೇವಿಸುವವರು ಅದನ್ನು ತಿನ್ನುವುದನ್ನು ಮುಂದುವರಿಸಬಹುದು. ಯಾಕೆಂದರೆ, ಚಾಕೊಲೇಟ್ ಥಿಯೋಬ್ರೊಮಿನ್ ಅನ್ನು ಹೊಂದಿರುತ್ತದೆ. ಇದು ಉತ್ತೇಜಕವಾಗಿದೆ ಮತ್ತು ಇದು ಎದೆ ಹಾಲುಣಿಸುವ ಶಿಶು ಪ್ರಕ್ಷುಬ್ಧಗೊಳ್ಳಲು ಕಾರಣವಾಗುವ ಸಾಧ್ಯತೆ ಸ್ವಲ್ಪ ಇದೆ. ತಾಯಿ ಸೇವಿಸುವ ಆಹಾರದಿಂದ ಯಾವುದೇ ಪೋಷಕಾಂಶವು ಎದೆ ಹಾಲು ಸೇರುವುದರಿಂದ, ತಾಯಿಯು ಸೇವಿಸಬಾರದ ಆಹಾರ ಪದಾರ್ಥಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸುವಂತೆ ಎಚ್ಚರಿಕೆ ವಹಿಸಬೇಕು.