ಎರ್ನಾಕುಲಂ (ಕೇರಳ): ಕಾಂಗರೂ ಚೀಲದಲ್ಲಿ ಮಗುವನ್ನು ಹೊತ್ತುಕೊಂಡು ಫುಡ್ ಡೆಲಿವರಿ ಮಾಡುತ್ತಾ ಮಹಿಳೆಯೊಬ್ಬರು ತನ್ನ ವಿದ್ಯಾಭ್ಯಾಸಕ್ಕಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ.
ಕೇರಳದ ಎರ್ನಾಕುಲಂ ನಿವಾಸಿ ರೇಷ್ಮಾ ಎಂಬುವರು ಪ್ರೇಮ ವಿವಾಹವಾಗಿದ್ದು, ದುಬೈನ ಹೋಟೆಲ್‌ನಲ್ಲಿ ಪತಿ ರಾಜು ಕೆಲಸ ಮಾಡುತ್ತಾರೆ. ಡಿಪ್ಲೋಮಾ ಪದವಿ ಪಡೆದಿರುವ ರೇಷ್ಮಾ ತನ್ನ ವಿದ್ಯಾಭ್ಯಾಸ ಮುಂದುವರೆಸಲು ಇಚ್ಛಿಸಿದ್ದಾರೆ. ರಾಜು ಕಳುಹಿಸುವ ಹಣದಲ್ಲಿ ಜೀವನ ಸಾಗಿಸಲಾಗದೇ ಹಾಗೂ ತನ್ನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ರೇಷ್ಮಾ ಪ್ರಸಿದ್ಧ ಕಂಪನಿಯಲ್ಲಿ ಫುಡ್ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಾಜಕೀಯ ರಂಗಕ್ಕೂ ಕಾಲಿಟ್ಟ ಆನ್‌ಲೈನ್ ಜಾಹೀರಾತುಗಳು
ಇವರು ಮಗುವನ್ನು ವಾರದ ಆರು ದಿನಗಳು ಡೇ ಕೇರ್ ಸೆಂಟರ್ನಲ್ಲಿ ಬಿಡುತ್ತಾರೆ. ಆದರೆ ಭಾನುವಾರ ರಜಾ ದಿನವಾದ್ದರಿಂದ ಅಂದು ಕಾಂಗರೂ ಚೀಲದಲ್ಲಿ ಮಗುವನ್ನು ಹೊತ್ತುಕೊಂಡು ಫುಡ್ ಡೆಲಿವರಿ ಮಾಡಲು ರೇಷ್ಮಾ ತೆರಳುತ್ತಾರೆ. ಹೀಗೆ ಮಗುವನ್ನು ಹೊತ್ತುಕೊಂಡು ಸ್ಕೂಟಿಯಲ್ಲಿ ಹೋಗುತ್ತಿರುವ ರೇಷ್ಮಾರ ವಿಡಿಯೋವನ್ನು ಇವರ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದು ಸಖತ್ ವೈರಲ್ ಆಗಿದೆ.
ಹಸಿದವರಿಗೆ ಆಹಾರವನ್ನು ತಲುಪಿಸುವ ಕೆಲಸವನ್ನು ಮಾಡುವುದಕ್ಕಿಂತ ಹೆಚ್ಚು ಸಂತೋಷ ಬೇರೆ ಇಲ್ಲ ಎಂದು ಹೇಳುತ್ತಾರೆ ರೇಷ್ಮಾ.