ನವದೆಹಲಿ :ಕೇವಲ ಲಸಿಕೆಯಿಂದ ಮಾತ್ರ ಕೋವಿಡ್ ತಡೆಗಟ್ಟಲು ಸಾಧ್ಯವಿಲ್ಲ. ಭಾರತೀಯರು ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ ಹೆಚ್ಚು ಜನ ಸೇರಿ ಮಾಡುವ ಮದುವೆಯಂತಹ ಕೋವಿಡ್ ಸೂಪರ್ ಸ್ಪ್ರೆಡ್ಡರ್ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು. ಈ ಮೂಲಕ ಕೋವಿಡ್ -19 ಭಯವಿಲ್ಲದೆ ಮುಂದಿನ ವರ್ಷವನ್ನು ಪ್ರಾರಂಭಿಸಬೇಕು ಎಂದು ಖ್ಯಾತ ಆರೋಗ್ಯ ತಜ್ಞರು ಸಲಹೆಗಳನ್ನು ನೀಡಿದ್ದಾರೆ.
'ಈಟಿವಿ ಭಾರತ'ದೊಂದಿಗೆ ವಿಶೇಷ ಸಂವಾದದಲ್ಲಿ ಮಾತನಾಡಿದ ಖ್ಯಾತ ಆರೋಗ್ಯ ತಜ್ಞ ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಡಾ. ಕೆ. ಶ್ರೀನಾಥ್ ರೆಡ್ಡಿ, ಕೋವಿಡ್ ಎರಡನೇ ಅಲೆ ವಿರುದ್ಧದ ದೇಶದ ಹೋರಾಟ ಸಮಯಕ್ಕೆ ಸರಿಯಾಗಿ ಸಾರ್ವಜನಿಕರು ಕೈಗೊಳ್ಳುವ ಆರೋಗ್ಯ ಕ್ರಮಗಳ ಮೇಲೆ ಅವಂಬಿತವಾಗಿದೆ. ಇದು ಯಾವುದೇ ಹೊಸ ರೂಪಾಂತರಿಗಳ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಟ ಮಾಡಬಲ್ಲದು ಎಂದಿದ್ದಾರೆ.
ಕೇವಲ ಲಸಿಕೆಯನ್ನೇ ಅವಲಂಬಿಸಿ ಕೂರಬೇಡಿ. ನೀವು ಲಸಿಕೆಯನ್ನು ನಂಬಿ ಇತರ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಇನ್ನೂ ಒಂದು ವರ್ಷ ಈ ಆರೋಗ್ಯ ಬಿಕ್ಕಟ್ಟಿನಿಂದ ಹೊರ ಬರುವುದಿಲ್ಲ. ನಾವು ದೇಶದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ವರ್ಷವಾದ 2022 ಅನ್ನು ವೈರಸ್‌ನ ಭಯವಿಲ್ಲದೆ ಪ್ರಾರಂಭಿಸಬೇಕು. ನಮ್ಮ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ವ್ಯಾಕ್ಸಿನೇಷನ್ ಡ್ರೈವ್ ಎರಡನ್ನೂ ನಾವು 2021 ರಲ್ಲಿ ಶಿಸ್ತುಬದ್ಧಗೊಳಿಸಿದಾಗ ಮಾತ್ರ ಅದು ಸಾಧ್ಯ ಎಂದು ಡಾ. ರೆಡ್ಡಿ ಹೇಳಿದ್ದಾರೆ.
ಕೋವಿಡ್ ಎರಡನೇ ಅಲೆಗೆ ಕಾರಣವೇನು..?