ಕರ್ನಾಟಕ

karnataka

ETV Bharat / bharat

ಉತ್ತರ, ಈಶಾನ್ಯ ಭಾರತದ ಹಲವೆಡೆ ಆವರಿಸಿದ ದಟ್ಟ ಮಂಜು - ನವದೆಹಲಿ

ಉತ್ತರ ಮತ್ತು ಈಶಾನ್ಯ ಭಾರತದ ಅನೇಕ ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದೆ ಎಂದು ಭಾರತ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ. ಈ ಮಧ್ಯೆ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ (ಸಫಾರ್) ಪ್ರಕಾರ, ಒಟ್ಟಾರೆ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) 362 ರಷ್ಟಿದೆ.

Fog
ಮಂಜು

By

Published : Feb 3, 2021, 12:31 PM IST

ನವದೆಹಲಿ:ಉತ್ತರ ಮತ್ತು ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ದಟ್ಟವಾದ ಮಂಜು ಕಂಡುಬಂದಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.

ಐಎಂಡಿ ತಮ್ಮ ಅಧಿಕೃತ ಟ್ವಿಟ್ಟರ್​ನಲ್ಲಿ "ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಮುಂಜಾನೆ 5:30ಕ್ಕೆ ದಟ್ಟ ಮಂಜು ಆವರಿಸಿಕೊಂಡಿದ್ದು, ಪೂರ್ವ ಉತ್ತರ ಪ್ರದೇಶವೂ ದಟ್ಟ ಮಂಜಿನಿಂದ ಕೂಡಿದೆ." ಪಶ್ಚಿಮ ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವೆಡೆ ಮಧ್ಯಮದಿಂದ ದಟ್ಟವಾದ ಮಂಜು ಕಂಡುಬರುತ್ತದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

ಚಾಂದನಿ ಚೌಕ್‌ನ ಓವರ್‌ಬ್ರಿಡ್ಜ್ ಬಳಿ ಮುಜಫರ್ಪುರದ ವರೆಗೂ ದಟ್ಟ ಮಂಜು ಆವರಿಸಿದೆ. ಅಸ್ಸೋಂ, ಮೇಘಾಲಯ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮತ್ತು ತ್ರಿಪುರದಲ್ಲಿ ಮಧ್ಯಮ ಮಟ್ಟದಲ್ಲಿ ಮಂಜು ಕಂಡು ಬಂದಿದೆ ಎಂದು ಐಎಂಡಿ ತಿಳಿಸಿದೆ. ಭಾರಿ ಮಂಜಿನಿಂದಾಗಿ, ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.

ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ (ಸಫಾರ್) ಪ್ರಕಾರ, ಒಟ್ಟಾರೆ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) 362 ರಷ್ಟಿದೆ.

ABOUT THE AUTHOR

...view details