ನವದೆಹಲಿ :ಆರ್ಥಿಕತೆಯಲ್ಲಿಭಾರತವನ್ನು ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೇಶವನ್ನಾಗಿ ಮಾಡುವುದಕ್ಕೆ ಹೊಸ ಹೂಡಿಕೆ ಮಾಡಲು ಹೊಸ ಹುರುಪಿನ (ಅನಿಮಲ್ ಸ್ಪಿರಿಟ್)ನಂತೆ ಉದ್ಯಮಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ.
ಅಖಿಲ ಭಾರತ ನಿರ್ವಹಣಾ ಸಂಘ (ಎಐಎಂಎ) ಕಾರ್ಯಕ್ರಮವೊಂದರಲ್ಲಿ ಉದ್ಯಮಿಗಳ ಜೊತೆ ಮಾತನಾಡಿದ ಅವರು, ಹೂಡಿಕೆಗೆ ಅನುಕೂಲವಾಗುವಂತೆ ಕಾರ್ಪೊರೇಟ್ ತೆರಿಗೆ ದರ ಕಡಿತಗೊಳಿಸುವುದು ಸೇರಿ ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.
ಭಾರತದಲ್ಲಿ ಖಾಸಗಿ ಹೂಡಿಕೆದಾರರು ಮತ್ತು ಖಾಸಗಿ ಉದ್ಯಮಗಳು ನವಚೈತನ್ಯದೊಂದಿಗೆ (Animal spirit) ಮುಂದೆ ಬಂದು ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ತೋರಿಸಬೇಕಿದೆ ಎಂದಿದ್ದಾರೆ.
ತೆರಿಗೆ ಕಡಿತದ ನಂತರ ಭಾರತದಲ್ಲಿ ಖಾಸಗಿ ವಲಯದಿಂದ ಹೆಚ್ಚಿನ ಹೂಡಿಕೆಗಳನ್ನು ನೋಡುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದಿದ್ದಾರೆ. ‘ಅನಿಮಲ್ ಸ್ಪಿರಿಟ್ಸ್’ ಎಂಬ ಅಭಿವ್ಯಕ್ತಿಯನ್ನು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ಹೂಡಿಕೆ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುವ ಹೂಡಿಕೆದಾರರ ವಿಶ್ವಾಸ ಉಲ್ಲೇಖಿಸಲು ಬಳಸಿದರು.
ಇದನ್ನೂ ಓದಿ:ನಾನು ರಜಪೂತ ಮಹಿಳೆ, ಮೂಳೆ ಮುರಿಯುತ್ತೇನೆ: 'ನಾಚನೆ ಗಾನೆ ವಾಲಿ' ಹೇಳಿಕೆಗೆ ಕಂಗನಾ ರಿಯಾಕ್ಟ್