ಕರ್ನಾಟಕ

karnataka

ETV Bharat / bharat

ಕೊರೊನಾ ನಡುವೆಯೂ ಸರ್ಕಾರ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಂಡಿದೆ: ನಿರ್ಮಲಾ ಸೀತಾರಾಮನ್​​ - ಕೋವಿಡ್​ ಸಾಂಕ್ರಾಮಿಕ

ಕೊರೊನಾದಂತಹ ಸವಾಲಿನ ಸನ್ನಿವೇಶಕ್ಕೆ ದೀರ್ಘಾವಧಿಯ ಬೆಳವಣಿಗೆಯನ್ನು ಉಳಿಸಿಕೊಳ್ಳಲು ನಮ್ಮ ದೇಶಕ್ಕೆ ಬೇಕಾದ ಅಗತ್ಯವಾದ ಸುಧಾರಣೆಗಳನ್ನು ತೆಗೆದುಕೊಳ್ಳುವುದರಿಂದ ಸರ್ಕಾರವನ್ನು ತಡೆಯಲಾಗಲಿಲ್ಲ ಎಂದು ನಿರ್ಮಲಾ ಸೀತಾರಾಮನ್​​ ಹೇಳಿದ್ದಾರೆ.

FM Sitharaman
ನಿರ್ಮಲಾ ಸೀತಾರಾಮನ್​​

By

Published : Feb 13, 2021, 11:15 AM IST

ನವದೆಹಲಿ:ಕೋವಿಡ್​ ಸಾಂಕ್ರಾಮಿಕದಂತಹ ಸವಾಲಿನ ಸಂದರ್ಭದಲ್ಲಿಯೂ ಆರ್ಥಿಕ ಸುಧಾರಣೆಗಳನ್ನು ಸರ್ಕಾರ ಕೈಗೊಂಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಹೇಳಿದ್ದಾರೆ.

ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ

ಇಂದಿನ ಲೋಕಸಭಾ ಕಲಾಪದಲ್ಲಿ ಮಾತನಾಡುತ್ತಿರುವ ಸೀತಾರಾಮನ್, ಸಾಂಕ್ರಾಮಿಕ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಮಾಡಿಕೊಂಡಿದ್ದೇವೆ. ಸವಾಲಿನ ಸನ್ನಿವೇಶಕ್ಕೆ ದೀರ್ಘಾವಧಿಯ ಬೆಳವಣಿಗೆಯನ್ನು ಉಳಿಸಿಕೊಳ್ಳಲು ನಮ್ಮ ದೇಶಕ್ಕೆ ಬೇಕಾದ ಅಗತ್ಯವಾದ ಸುಧಾರಣೆಗಳನ್ನು ತೆಗೆದುಕೊಳ್ಳುವುದರಿಂದ ಸರ್ಕಾರವನ್ನು ತಡೆಯಲಾಗಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಭಾರತದಲ್ಲಿ ಕೊರೊನಾ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 1.36 ಲಕ್ಷಕ್ಕೆ ಇಳಿಕೆ.. 79 ಲಕ್ಷ ಮಂದಿಗೆ ಲಸಿಕೆ

ನಾವು ಕೇವಲ ಒಂದು ಸುಧಾರಣೆ ಕೈಗೊಂಡಿಲ್ಲ. ಭಾರತೀಯ ಉದ್ಯಮಶೀಲ ಕೌಶಲ್ಯ, ಭಾರತೀಯ ವ್ಯವಸ್ಥಾಪಕ ಕೌಶಲ್ಯ, ವ್ಯಾಪಾರ ಕೌಶಲ್ಯ, ಭಾರತೀಯ ಯುವಕರು, ಜನಸಂಘವನ್ನು ಗೌರವಿಸಿದ ಬಿಜೆಪಿಯು ಭಾರತವನ್ನು ಸತತವಾಗಿ ನಂಬಿದೆ. ನಾವು ಎಲ್ಲಿಂದಲೋ ಏನನ್ನೂ ಎರವಲು ಪಡೆದಿಲ್ಲ. ಮುಂಬರುವ ದಶಕದಲ್ಲಿ ಭಾರತವು ವಿಶ್ವದ ಉನ್ನತ ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

ABOUT THE AUTHOR

...view details