ಕನ್ಯಾಕುಮಾರಿ: ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 15 ಕೆ.ಜಿ 55ಗ್ರಾಂ ಚಿನ್ನವನ್ನು ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸರಿಯಾದ ದಾಖಲೆಗಳಿಲ್ಲದೇ ಕೇರಳದಿಂದ ನಾಗರ್ಕೋಯಿಲ್ಗೆ ರವಾನಿಸುತ್ತಿದ್ದ ಗೋಲ್ಡ್ ಬಾರ್ ಹಾಗೂ ಚಿನ್ನದ ಆಭರಣ ವಶಕ್ಕೆ ಪಡೆಯಲಾಗಿದೆ.
ಕೇರಳ ನೋಂದಣಿ ಹೊಂದಿದ್ದ ವಾಹನ ತಪಾಸಣೆ ಮಾಡಿದಾಗ ಚಿನ್ನ ಕಂಡು ಬಂದಿದೆ. ಆದರೆ, ಚಾಲಕನ ಬಳಿ ಸೂಕ್ತ ದಾಖಲೆಗಳು ಇಲ್ಲವಾದ್ದರಿಂದ ಚಿನ್ನಾಭರಣವನ್ನು ಜಪ್ತಿ ಮಾಡಿ ತಹಶೀಲ್ದಾರ್ ಅವರಿಗೆ ಒಪ್ಪಿಸಲಾಗಿದೆ.