ಕರ್ನಾಟಕ

karnataka

ETV Bharat / bharat

WATCH: ನದಿಯಾಚೆ ಈಚೆ ಹಗ್ಗ ಕಟ್ಟಿ ಬೃಹತ್‌ ಜೆಸಿಬಿಯನ್ನೇ ಸಾಗಿಸಿಬಿಟ್ಟರಲ್ಲ! - flying jcb

ಉತ್ತರಾಖಂಡದ ಬೆಟ್ಟ ಗುಡ್ಡ ಪ್ರದೇಶದಲ್ಲಿರುವ ಅಲಕಾನಂದ ನದಿಯ ಸುತ್ತಮುತ್ತ ರಸ್ತೆ ನಿರ್ಮಾಣ ಕಾರ್ಯ ಮಾನವ ಶ್ರಮದಿಂದ ಸಾಗುತ್ತಿದೆ. ಇಲ್ಲಿ ಒಂದು ಕಡೆಯಿಂದ ಮತ್ತೊಂದೆಡೆಗೆ ಸಂಚರಿಸಲು ಸೇತುವೆ ವ್ಯವಸ್ಥೆ ಇನ್ನಷ್ಟೇ ಆಗಬೇಕಿದೆ. ಪರಿಣಾಮ, ರಸ್ತೆ ಕಾಮಗಾರಿ ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಜೆಸಿಬಿ ಯಂತ್ರದ ಅವಶ್ಯಕತೆ ತುಂಬಾ ಇದೆ. ಹೀಗಾಗಿ, ಟನ್‌ಗಟ್ಟಲೆ ಭಾರದ ಜೆಸಿಬಿ ಯಂತ್ರವನ್ನು ನದಿಯ ಎರಡೂ ಭಾಗಕ್ಕೆ ಹಗ್ಗ ಕಟ್ಟಿ ಸಾಗಿಸಬೇಕಾಯ್ತು. ಈ ವಿಡಿಯೋ ನೋಡಿದರೆ ಎಂಥವರಿಗೂ ಅಚ್ಚರಿಯಾಗದೆ ಇರದು.

flying jcb! crossing alakananda river...!
ಹಗ್ಗದ ಸಹಾಯದಿಂದ ಜೆಸಿಬಿ ಯಂತ್ರ ಸಾಗಣೆ!

By

Published : Apr 27, 2021, 2:18 PM IST

Updated : Apr 27, 2021, 3:17 PM IST

ಚಮೋಲಿ(ಉತ್ತರಾಖಂಡ): ರಸ್ತೆ ನಿರ್ಮಾಣಕ್ಕಾಗಿ ಭಾರಿ ತೂಕದ ಜೆಸಿಬಿ ಯಂತ್ರವನ್ನು ಅಲಕಾನಂದದ ನದಿಯ ಒಂದು ದಂಡೆಯಿಂದ ಮತ್ತೊಂದು ದಂಡೆಗೆ ಹಗ್ಗದ ಸಹಾಯದಿಂದ ಸಾಗಿಸಿದ್ದು ಅಚ್ಚರಿ ಮೂಡಿಸಿದೆ.

ರಸ್ತೆ ಕಾಮಗಾರಿಗೆ ಜೆಸಿಬಿ ರವಾನೆ

2010 ರಲ್ಲಿ ಬೆಟ್ಟಗುಡ್ಡದಿಂದ ಆವೃತವಾಗಿರುವ ದುರ್ಗಮ ಡಿಂಗ್-ತಪೋನ್​​ನಲ್ಲಿ 6 ಕಿಲೋಮೀಟರ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಸದ್ಯ ಈ ರಸ್ತೆ ನಿರ್ಮಾಣ ಕಾರ್ಯ ಮಾನವ ಶ್ರಮದಿಂದಲೇ ನಡೆಯುತ್ತಿದೆ. ಇಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಲು ಅಲಕನಂದಾ ನದಿಗೆ ಸೇತುವೆ ಇರದ ಕಾರಣ ಜೆಸಿಬಿ ಯಂತ್ರವನ್ನು ನದಿಯ ಎರಡೂ ಬದಿಗೆ ಹಗ್ಗ ಕಟ್ಟಿ ಭಗೀರಥ ಪ್ರಯತ್ನ ನಡೆಸಿ ಸಾಗಿಸಲಾಗಿದೆ.

ಹಗ್ಗದ ಸಹಾಯದಿಂದ ಅಲಕನಂದಾ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಜೆಸಿಬಿ ಯಂತ್ರ ಸಾಗಣೆಯ ರೋಚಕ ದೃಶ್ಯ

ಈ ಯಂತ್ರದ ಸಹಾಯದಿಂದ ರಸ್ತೆ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ.

ಇದನ್ನೂ ಓದಿ:ಕೋವಿಡ್​ಗೆ ಹೆದರಿ 55 ವರ್ಷದ ಮಹಿಳೆ ಆತ್ಮಹತ್ಯೆ

Last Updated : Apr 27, 2021, 3:17 PM IST

ABOUT THE AUTHOR

...view details