ನವದೆಹಲಿ: ವಿರಳವಾಗಿ ಬಳಸಲಾಗುವ, ಉಚ್ಚರಿಸಲು ಕಷ್ಟವಾದ ಇಂಗ್ಲಿಷ್ ಪದಗಳ ಬಗ್ಗೆ ಹೆಚ್ಚು ಒಲವು ಹೊಂದಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಮತ್ತೇ ತಲೆ ತಿರುಗುವ ಪದವೊಂದನ್ನು ಹೇಳಿದ್ದಾರೆ.
ಶಶಿ ತರೂರ್ ತಮ್ಮ ಟ್ವೀಟ್ನಲ್ಲಿ ಬಳಸಿದ floccinaucinihilipilification ಎಂಬ ಪದವನ್ನು ಬಳಕೆ ಮಾಡಿದ್ದಾರೆ. floccinaucinihilipilification ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸ ಎಂದರ್ಥ
ಈ ಸಂಬಂಧ ಟ್ವೀಟ್ ಮಾಡಿರುವ ತೆಲಂಗಾಣ ಸಚಿವ ಕೆಟಿಆರ್ Posaconazole, Cresemba, Tocilizumab, Remdesivir, Liposomal Amphotericin, Flavipiravir, Molnupiravir, Baricitinib ಮೊದಲಾದ ಔಷಧಗಳ ಹೆಸರು ಪಟ್ಟಿ ಮಾಡಿ ,ಈ ರೀತಿಯ ಹೆಸರುಗಳನ್ನಿಡುವಲ್ಲಿ ಸಂಸದ ಶಶಿ ತರೂರ್ ಕೈವಾಡವಿರಬಹುದೇ? ಎಂದು ತರೂರ್ ಅವರಿಗೆ ಟ್ವೀಟ್ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಔಷಧಗಳಿಗೆ ಹೆಸರಿಟ್ಟಿದ್ದು ನಾನಲ್ಲ. ಈ ರೀತಿಯ ನಿಷ್ಪ್ರಯೋಜಕ ಕೆಲಸದಲ್ಲಿ ನನ್ನನ್ನು ನೀವು ಭಾಗಿಮಾಡಿದ್ದೇಕೆ? ಒಂದು ವೇಳೆ ನಾನು ಈ ಕೆಲಸ ಮಾಡುತ್ತಿದ್ದರೆ ‘CoroNil’, ‘CoroZero’ ಮತ್ತು ‘GoCoronaGo’ ಎಂದು ಹೆಸರಿಡುತ್ತಿದ್ದೆ. ಆದರೆ, ಈ ಫಾರ್ಮಸಿಸ್ಟ್ ಗಳು procrustean ಎಂದು ಹೇಳಿದ್ದಾರೆ ಎಂದಿದ್ದಾರೆ. ಇನ್ನು ಇವರು ಬಳಸಿದ ಪದದಲ್ಲಿ ಇಂಗ್ಲಿಷ್ ಕಾಗುಣಿತವನ್ನೂ ಮೀರಿದ ಪದಗಳಿರುವುದು ವಿಶೇಷ .
ಕೇಂಬ್ರಿಡ್ಜ್ ನಿಘಂಟಿನ ಪ್ರಕಾರ, ಅತೀ ಉದ್ದದ ತಾಂತ್ರಿಕೇತರ ಪದ ಎಂಬ ಗೌರವವು floccinaucinihilipilificationಗೆ ಸಲ್ಲುತ್ತದೆ.
ತರೂರ್ ಅವರ ಪೋಸ್ಟ್‌ಗೆ ಹಲವಾರು ಜನರು ಪ್ರತಿಕ್ರಿಯಿಸಿದರು, ಈ ಪದವನ್ನು ಉಚ್ಚರಿಸುವುದು ಎಷ್ಟು ಕಷ್ಟ ಎಂದು ಅನೇಕರು ತಮಾಷೆ ಮಾಡಿದ್ದಾರೆ ಮತ್ತು ಇನ್ನೂ ಅನೇಕರು ಅದರ ಮೇಲೆ ಮೇಮ್‌ಗಳನ್ನು ಹಂಚಿಕೊಂಡಿದ್ದಾರೆ.
ತರೂರ್ ಈ ಹಿಂದೆಯೂ "ಫಾರ್ರಾಗೊ" ಮತ್ತು "ಟ್ರೊಗ್ಲೊಡೈಟ್" ನಂತಹ ಇಂಗ್ಲಿಷ್ ಪದಗಳನ್ನು ಬಳಸಿದ್ದಾರೆ. ಫಾರ್ರಾಗೊ ಎಂದರೆ ಗೊಂದಲಮಯ ಮಿಶ್ರಣವಾದರೆ, ಟ್ರೊಗ್ಲೊಡೈಟ್ ಎಂದರೆ ಉದ್ದೇಶಪೂರ್ವಕವಾಗಿ ಅಜ್ಞಾನ ಅಥವಾ ಹಳೆಯ-ಶೈಲಿಯ ವ್ಯಕ್ತಿ ಎಂಬ ಅರ್ಥ ಕೊಡುತ್ತದೆ.