ಕರ್ನಾಟಕ

karnataka

ETV Bharat / bharat

2040 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಗೆ ಬದ್ಧ: ಫ್ಲಿಪ್‌ಕಾರ್ಟ್ - ಇ ಕಾಮರ್ಸ್​ನ ದೈತ್ಯ ಫ್ಲಿಪ್‌ಕಾರ್ಟ್ ಗ್ರೂಪ್

ಫ್ಲಿಪ್‌ಕಾರ್ಟ್ ಗ್ರೂಪ್ ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸಲು ಸೌರಶಕ್ತಿಯಂತಹ ನವೀಕರಿಸಬಹುದಾದ ಮೂಲಗಳನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

ಇ ಕಾಮರ್ಸ್​ನ ದೈತ್ಯ ಫ್ಲಿಪ್‌ಕಾರ್ಟ್ ಗ್ರೂಪ್
ಇ ಕಾಮರ್ಸ್​ನ ದೈತ್ಯ ಫ್ಲಿಪ್‌ಕಾರ್ಟ್ ಗ್ರೂಪ್

By

Published : Jun 23, 2022, 10:17 PM IST

ನವದೆಹಲಿ: ಇ-ಕಾಮರ್ಸ್​ ದೈತ್ಯ ಫ್ಲಿಪ್‌ಕಾರ್ಟ್ ಗ್ರೂಪ್ 2030 ರ ವೇಳೆಗೆ ತನ್ನದೇ ಆದ ಕಾರ್ಯಾಚರಣೆಗಳಲ್ಲಿ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿ ಸಾಧಿಸಲು ಹಾಗೂ 2040 ರ ವೇಳೆಗೆ ದೊಡ್ಡ ಮಟ್ಟದಲ್ಲಿ ಇದನ್ನು ಸಾಧಿಸಲು ಬದ್ಧವಾಗಿದೆ ಎಂದು ಹೇಳಿದೆ.

ಈ ಪ್ರತಿಜ್ಞೆಯ ಭಾಗವಾಗಿ ಫ್ಲಿಪ್‌ಕಾರ್ಟ್ ಗ್ರೂಪ್ ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸಲು ಸೌರಶಕ್ತಿಯಂತಹ ನವೀಕರಿಸಬಹುದಾದ ಮೂಲಗಳನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. 2030 ರ ವೇಳೆಗೆ 100 ಪ್ರತಿಶತದಷ್ಟು ಹೊರಸೂಸುವಿಕೆ ಕಡಿಮೆ ಮಾಡಲು ತನ್ನದೇ ಆದ ಕಾರ್ಯಾಚರಣೆಗಳನ್ನು ನಡೆಸುವುದಾಗಿ ತಿಳಿಸಿದೆ.

ಹಾಗೆಯೇ ಈ ಕಾರ್ಯಾಚರಣೆಗಳಲ್ಲಿ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ಸಾಧಿಸಲು 2040ರ ವೇಳೆಗೆ ಮಾರಾಟಗಾರರು, ಗ್ರಾಹಕರು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಫ್ಲಿಪ್‌ಕಾರ್ಟ್ ಗ್ರೂಪ್‌ನ ಪರಿಸರ ಗುರಿಗಳು ಪ್ಯಾರಿಸ್ ಹವಾಮಾನ ಒಪ್ಪಂದದ ಪ್ರಕಾರ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿರುವ ಜಾಗತಿಕ ವಿಜ್ಞಾನ-ಆಧಾರಿತ ಗುರಿಗಳ ಕ್ರಮಕ್ಕೆ (SBTi) ಅನುಗುಣವಾಗಿದೆ. ಈ ಕೆಲಸಕ್ಕೆ ಮುಂದಾಗಿರುವ ಏಕೈಕ ಇ-ಕಾಮರ್ಸ್ ಸಂಸ್ಥೆಯಾಗಿದೆ.

ಇದನ್ನೂ ಓದಿ: ಕೇದಾರನಾಥ ಯಾತ್ರೆಯಲ್ಲಿ 175 ಕುದುರೆ, ಕತ್ತೆಗಳ ಸಾವು: ಮಾಲೀಕರಿಗೆ ಕೋಟಿ ಕೋಟಿ ಆದಾಯ!

ABOUT THE AUTHOR

...view details