ರಾಜೌರಿ ( ಜಮ್ಮು ಕಾಶ್ಮೀರ) :ನಿನ್ನೆ ರಾತ್ರಿ ರಾಜೌರಿ ಜಿಲ್ಲೆಯ ದರ್ಹಳ್ಳಿ ನಾಲಾದಲ್ಲಿ ಹಠಾತ್ ಪ್ರವಾಹಕ್ಕೆ ಟಿಪ್ಪರ್ ಚಾಲಕ ಮತ್ತು ಸಹಾಯಕ ವಾಹನದ ಜೊತೆಗೆ ಕೊಚ್ಚಿಹೋಗಿದ್ದಾರೆ. ಸೋಕರ್ ಕೊಟ್ರಂಕದ ನಿವಾಸಿಗಳಾದ ಮೊಹಮ್ಮದ್ ಅಸ್ಲಾಂ ಅವರ ಪುತ್ರ ಸಜಾದ್ ಅಹ್ಮದ್ ಮತ್ತು ಜಮಾಲ್ ದಿನ್ ಅವರ ಪುತ್ರ ಅಬ್ರಾರ್ ಅಹ್ಮದ್ ಇಬ್ಬರೂ ಟಿಪ್ಪರ್‌ಗೆ ಮರಳು ತುಂಬುತ್ತಿದ್ದಾಗ ಧರಹಳ್ಳಿ ನಾಲಾದಲ್ಲಿ ಕೊಚ್ಚಿಹೋಗಿದ್ದಾರೆ.
ಲೋಡಿಂಗ್ ಸಮಯದಲ್ಲಿ ನಲ್ಲಾದಲ್ಲಿ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಇದು ಘಟನೆಗೆ ಕಾರಣವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಣೆಯಾದವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಮತ್ತು ಸೇನೆಯ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಚಾಲಕನ ದೇಹವನ್ನು ನಾಲಾದಿಂದ ಹೊರತೆಗೆಯಲಾಗಿದೆ.