ವಿಶಾಖಪಟ್ಟಣ:ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ಪ್ರಸಿದ್ಧ ರಾಮಕೃಷ್ಣ(ಆರ್ಕೆ) ಬೀಚ್ನಲ್ಲಿ ಸ್ನಾನಕ್ಕೆಂದು ಇಳಿದಿದ್ದ ವೇಳೆ ಓರ್ವ ಯುವತಿ ಸೇರಿದಂತೆ ಐವರು ನೀರು ಪಾಲಾದ ದುರ್ಘಟನೆ ಇಂದು ನಡೆದಿದೆ.
ಈಜಾಡುವ ವೇಳೆ ನೀರಿನ ರಭಸಕ್ಕೆ ಐವರು ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೋಧ ಕಾರ್ಯಾಚರಣೆ ನಡೆಸಿದಾಗ ಇಬ್ಬರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ನೀರುಪಾಲಾದ ಐದು ಜನ ಒಡಿಶಾ ಮೂಲದವರು ಎಂದು ತಿಳಿದುಬಂದಿದೆ.