ಆಗ್ರಾ: ಅಕಾಲಿಕ ಸಾವನ್ನಪ್ಪಿದ ಐದು ವರ್ಷದ ಬಾಲಕಿಯ ಕಣ್ಣುಗಳನ್ನು ದಾನ ಮಾಡಲು ಆಕೆಯ ಪೋಷಕರು ಮುಂದಾಗಿದ್ದಾರೆ. ಬೇರೊಬ್ಬರ ಜೀವನದಲ್ಲಿ ಬೆಳಕು ಮೂಡಿಸುವ ಮೂಲಕ ಪುಟ್ಟ ಮಗಳನ್ನು ಕಾಣಲು ಮುಂದಾಗಿದ್ದಾರೆ. ಕುಟುಂಬದ ಆಸೆಯಂತೆ ಎಸ್ಎನ್ ಮೆಡಿಕಲ್ ಕಾಲೇಜಿನ ಐ ಬ್ಯಾಂಕ್ನಿಂದ ಐದು ವರ್ಷದ ಮಗುವಿನ ಕಣ್ಣುಗಳನ್ನು ಪಡೆಯಲಾಗಿದೆ.
ಐದು ವರ್ಷದ ಮಗುವಿನ ಕಣ್ಣುಗಳನ್ನು ದಾನ ಮಾಡಿರುವುದು ಆಗ್ರಾದಲ್ಲಿ ಇದೀಗ ಎಲ್ಲರ ಮೆಚ್ಚುಗೆ ಪಡೆದಿದೆ. ಉತ್ತರ ವಿಜಯನಗರ ಕಾಲೋನಿಯ ಸಿಎ ಆಗಿರುವ ವಿಜಯ್ ಅಗರ್ವಾಲ್ ಐದು ವರ್ಷದ ಮಗಳು ಕೇತಿ ನೇತ್ರಗಳನ್ನು ದಾನ ಮಾಡಿದ್ದಾರೆ. ಗುರುವಾರ ಬೆಳಗ್ಗೆ 8.30ಕ್ಕೆ ಕೇತಿ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾಳೆ. ಪುಟ್ಟ ಮಗು ಕಳೆದುಕೊಂಡ ದುಃಖದಲ್ಲೂ ವಿವೇಕ್ ಕುಟುಂಬ ಇನ್ನೊಬ್ಬರಿಗೆ ಬೆಳಕಾಗಲು ನಿರ್ಧರಿಸಿ, ಎಸ್ಎನ್ ಮೆಡಿಕಲ್ ಕಾಲೇಜ್ ಐ ಬ್ಯಾಂಕ್ನ ಡಾ. ಶೆಫಲಿ ಮಜುಂದಾರ್ ಅವರನ್ನು ಸಂಪರ್ಕಿಸಿದ್ದಾರೆ.