ಕರ್ನಾಟಕ

karnataka

ETV Bharat / bharat

ಚೇಳು ಕಚ್ಚಿ ಐದು ವರ್ಷದ ಬಾಲಕ ಸಾವು... ಮೂಢನಂಬಿಕೆಯೇ ಮಗುವಿನ ಜೀವಕ್ಕೆ ಎರವಾಯ್ತಾ? - Five year old dies of scorpion bite in Bihar

ಚೇಳು ಕಚ್ಚಿದ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳದೇ ಭೂತೋಚ್ಚಾಟಕರ ಬಳಿ ಕರೆದುಕೊಂಡು ಹೋದ ಪರಿಣಾಮ ಐದು ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

scorpion
ಚೇಳು

By ETV Bharat Karnataka Team

Published : Oct 12, 2023, 12:45 PM IST

ಪಾಟ್ನಾ (ಬಿಹಾರ) : ಒಂದೆಡೆ ಚಂದ್ರಯಾನದಂತಹ ಬಾಹ್ಯಾಕಾಶ ಯೋಜನೆಗಳ ಮೂಲಕ ದೇಶದಲ್ಲಿ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. ಇನ್ನೊಂದೆಡೆ, ಬಿಹಾರದಂತಹ ರಾಜ್ಯದಲ್ಲಿ ಇಂದಿಗೂ ಭೂತೋಚ್ಚಾಟನೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವವರಿದ್ದಾರೆ. ಇದೀಗ ನಳಂದ ಜಿಲ್ಲೆಯ ರಾಹುಯಿ ಬ್ಲಾಕ್‌ನ ಚಂದುವಾರಾ ಗ್ರಾಮದಲ್ಲಿ ಇಂತಹ ಘಟನೆ ಕಂಡುಬಂದಿದೆ. ಮಗುವೊಂದಕ್ಕೆ ಚೇಳು ಕಚ್ಚಿದ್ದು, ಕುಟುಂಬಸ್ಥರು ಸಕಾಲಕ್ಕೆ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯದ ಕಾರಣ ಭೂತ ವಿಸರ್ಜನೆ ಮೊರೆ ಹೋಗಿದ್ದಾರೆ. ಪರಿಣಾಮ ಐದು ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.

ಚಂದೂರ ಗ್ರಾಮದ ಕರು ಮಿಸ್ತ್ರಿ ಎಂಬುವರ 5 ವರ್ಷದ ಪುತ್ರ ಸುಮಿತ್ ಕುಮಾರ್ ಮೃತ ಬಾಲಕ. ಆಟವಾಡುತ್ತಿದ್ದ ವೇಳೆ ಮಗುವಿಗೆ ಚೇಳು ಕಚ್ಚಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದಾದ ನಂತರ ಮಗು ಚಡಪಡಿಸಲಾರಂಭಿಸಿದ್ದು, ನಂತರ ಗ್ರಾಮದ ಭೂತೋಚ್ಚಾಟಕರ ಬಳಿ ಕರೆದೊಯ್ದು ಭೂತ ವಿಸರ್ಜನೆ ಮಾಡಲಾಗಿದೆ. ರಾತ್ರಿ 3 ಗಂಟೆ ವೇಳೆಗೆ ಮಗು ಚೇತರಿಸಿಕೊಂಡಿದೆ ಎಂದು ಭೂತೋಚ್ಚಾಟಕರು ತಿಳಿಸಿದ್ದು, ಬಳಿಕ ಮಗುವನ್ನು ಮನೆಗೆ ಕರೆತರಲಾಗಿದೆ.

ಮನೆಗೆ ಬಂದ ನಂತರ ಮಗುವಿನ ಆರೋಗ್ಯ ಮತ್ತೆ ಹದಗೆಡಲು ಪ್ರಾರಂಭಿಸಿದ್ದು, ನಂತರ ಹತ್ತಿರದ ಮಾರುಕಟ್ಟೆಗೆ ಕರೆದೊಯ್ದು ಔಷಧ ನೀಡಲಾಗಿದೆ. ಬಳಿಕ ಬಾಲಕ ಮತ್ತೆ ಸ್ವಲ್ಪ ಸಮಯದವರೆಗೆ ಚೇತರಿಸಿಕೊಂಡನು. ಬೆಳಗ್ಗೆ ಮತ್ತೆ ಜ್ವರ ಕಾಣಿಸಿಕೊಂಡ ನಂತರ ಚಿಕಿತ್ಸೆ ನೀಡಲು ರಾಹುಯಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಬಿಹಾರ್‌ಷರೀಫ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಇಲ್ಲಿಗೆ ಕರೆತಂದಾಗ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ ಎಂದು ಬಾಲಕನ ಅಜ್ಜಿ ರಿಂಕು ದೇವಿ ಹೇಳಿದ್ದಾರೆ.

ಇದನ್ನೂ ಓದಿ :ನೀರು ಕುಡಿದಷ್ಟೆ ಸರಳವಾಗಿ ಚೇಳು ಆಡಿಸುವ ಆಸಾಮಿ.. ಇವ ದಾವಣಗೆರೆಯ ಸ್ಕಾರ್ಪಿಯೋ ಮ್ಯಾನ್ ​!

ಇನ್ನು ಚೇಳು ಕಚ್ಚಿದ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರೆ ಆತನ ಜೀವ ಉಳಿಸುವ ಸಾಧ್ಯತೆಗಳು ಹೆಚ್ಚಿರುತ್ತಿತ್ತು ಎಂದು ಸದರ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಮಗುವನ್ನು ಕಳೆದುಕೊಂಡ ಬಾಲಕರ ಆಕ್ರಂದನ ಆಸ್ಪತ್ರೆ ಆವರಣದಲ್ಲಿ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ :Poison Man : ಹಾವು, ಚೇಳು, ವಿಷಕಾರಿ ಹುಳು ಕಚ್ಚಿದರೆ ಬಾಯಿಂದ ವಿಷ ತೆಗೆಯುವ ವ್ಯಕ್ತಿ!

ಇನ್ನು ಮಧ್ಯಪ್ರದೇಶದ ಉಜ್ಜೈನಿಯ ನೀಲಗಂಗಾದಲ್ಲಿ ಜನರು ವಿಷಕಾರಿ ಹಾವು, ಚೇಳು ಕಚ್ಚಿದರೆ ವಿಷ್ಣು ನರ್ವಾಲೆ ಎಂಬ ವ್ಯಕ್ತಿಯ ಬಳಿ ಕರೆದುಕೊಂಡು ಬರುತ್ತಾರೆ. ಕೆಲವೇ ಸೆಕೆಂಡ್​​​ಗಳಲ್ಲಿ ವಿಷ ಹೊರತೆಗೆಯುವ ಇವರು, ಅನೇಕರಿಗೆ ಪುನರ್ಜನ್ಮ ನೀಡುತ್ತಿದ್ದಾರೆ. ಸುಮಾರು 75 ವರ್ಷಗಳಿಂದಲೂ ಈ ಕಾಯಕ ಮಾಡಿಕೊಂಡು ಬರುತ್ತಿದ್ದು, ಎಂತಹ ವಿಷಯಕಾರಿ ಹುಳು ಕಚ್ಚಿದರೂ, ಕೆಲವೇ ಸೆಕೆಂಡ್​​​ಗಳಲ್ಲಿ ಬಾಯಿಂದ ವಿಷ ಹೊರ ತೆಗೆಯುತ್ತಾರೆ.

ಇದನ್ನೂ ಓದಿ :ಯಾರೂ ಇಲ್ಲದ ಮನೆಯಲ್ಲಿ ಸಾವಿರಾರು ಚೇಳುಗಳು ವಾಸ ! ವಿಡಿಯೋ ವೈರಲ್​

ABOUT THE AUTHOR

...view details