ಕರ್ನಾಟಕ

karnataka

ETV Bharat / bharat

ಸೆಪ್ಟಿಕ್​ ಟ್ಯಾಂಕ್‌ಗಿಳಿದ ಒಂದೇ ಕುಟುಂಬದ ಐವರ ದುರ್ಮರಣ

ಈ ಘಟನೆಯಲ್ಲಿ ಓರ್ವನ ಪರಿಸ್ಥಿತಿ ಗಂಭೀರವಾಗಿದ್ದು, ಪರಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

five workers died while cleaning septic tank in parbhani
ಸೆಪ್ಟಿಕ್​ ಟ್ಯಾಂಕ್​ ಸ್ವಚ್ಛಗೊಳಿಸಲು ಟ್ಯಾಂಕ್​ಗೆ ಇಳಿದ ಒಂದೇ ಕುಟುಂಬದ ಐವರು ದುರ್ಮರಣ

By

Published : May 12, 2023, 1:09 PM IST

Updated : May 12, 2023, 1:41 PM IST

ಸೆಪ್ಟಿಕ್​ ಟ್ಯಾಂಕ್‌ಗಿಳಿದ ಒಂದೇ ಕುಟುಂಬದ ಐವರ ದುರ್ಮರಣ

ಛತ್ರಪತಿ ಸಂಭಾಜಿನಗರ (ಪರ್ಭಾನಿ):ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಟ್ಯಾಂಕ್​ಗೆ ಇಳಿದ ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿದ್ದು, ಪರಲಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದ್ದು, ಪರಭಾನಿಯ ಸೋನ್‌ಪೇತ್ ತಾಲೂಕಿನ ಭೌಚನ್​ ತಾಂಡಾದಲ್ಲಿ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭೌಚನ್​​ ತಾಂಡಾದ ವಿಠ್ಠಲ್ ಮರೋಟಿ ರಾಠೋಡ್ ಅವರ ತೋಟದ ಮನೆಯಲ್ಲಿ ಗುರುವಾರ ಮಧ್ಯಾಹ್ನದಿಂದಲೇ ಕೆಲವರು ಸೆಪ್ಟಿಕ್ ತೊಟ್ಟಿ ಸ್ವಚ್ಛಗೊಳಿಸುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಟ್ಯಾಂಕ್‌ನಲ್ಲಿದ್ದವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ವಿಷಯ ತಿಳಿಸಿ ಜೆಸಿಬಿ ಸಹಾಯದಿಂದ ಸೆಪ್ಟಿಕ್ ಟ್ಯಾಂಕ್ ಒಡೆದು 6 ಮಂದಿಯನ್ನು ಹೊರತೆಗೆದಿದ್ದಾರೆ. ಅಷ್ಟೊತ್ತಿಗಾಗಲೇ 5 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಪರಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪರಭಾನಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮೃತರಲ್ಲಿ ಮಾವ, ಅಳಿಯ ಮತ್ತು ಸೋದರ ಸಂಬಂಧಿ ಸೇರಿದ್ದಾರೆ. ಇವರೆಲ್ಲರೂ ಸೋನ್‌ಪೇತ್ ನಗರದ ನಿವಾಸಿಗಳು. ಮೃತರನ್ನು ಶೇಖ್ ಸಾದೇಕ್ (45), ಅವರ ಮಗ ಶೇಖ್ ಶಾರುಖ್ (20), ಅವರ ಅಳಿಯ ಶೇಖ್ ಜುನೈದ್ (29), ಜಾವೇದ್ ಅವರ ಸಹೋದರ ಶೇಖ್ ನಾವಿದ್ (25), ಸೋದರ ಸಂಬಂಧಿ ಶೇಖ್ ಫಿರೋಜ್ (19) ಎಂದು ಗುರುತಿಸಲಾಗಿದೆ. ಮತ್ತು ಶೇಖ್ ಸಾಬರ್ (18) ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಸುರಕ್ಷತಾ ಟ್ಯಾಂಕ್‌ನಲ್ಲಿ ಅನಿಲ ರಚನೆಯಾಗಿ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಅಂದಾಜಿಸಲಾಗಿದೆ.

ಸಫಾಯಿ ಸಂಘದ ಅಧ್ಯಕ್ಷ ಶೇಖ್ ಸಜ್ಜನ್ ಮಾತನಾಡಿ, ರಾತ್ರಿ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಮ್ಮ ಸಮಾಜವು ಯಾವುದೇ ಸೌಲಭ್ಯಗಳಿಲ್ಲದೆ ಕೆಲಸ ಮಾಡುತ್ತಿದೆ. ಈ ಸಾವುಗಳಿಗೆ ಸರಕಾರವೇ ಹೊಣೆ. ಪ್ರತಿಯೊಬ್ಬ ಮೃತರ ಮನೆಯವರಿಗೂ ಸರ್ಕಾರ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಇಡೀ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಮ್ಯಾನ್​ ಹೋಲ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಉಸಿರುಗಟ್ಟಿ ಸಾವು

Last Updated : May 12, 2023, 1:41 PM IST

ABOUT THE AUTHOR

...view details