ಕರ್ನಾಟಕ

karnataka

ETV Bharat / bharat

ಸೂರತ್‌ನಲ್ಲಿ ಮ್ಯೂಕೋರ್ಮೈಕೋಸಿಸ್ ಶಿಲೀಂಧ್ರದ ಐದು ರೂಪಾಂತರಗಳು ಪತ್ತೆ!

ಸೂರತ್‌ನಲ್ಲಿ ಕಂಡು ಬರುವ ಮ್ಯೂಕಾರ್ಮೈಕೋಸಿಸ್​ನ ಐದು ರೂಪಾಂತರಗಳು ರೈಜೋಪಸ್, ರೈಜೋಮುಕೋರ್, ಅಬ್ಸಿಡಿಯಾ, ಸಿನ್ಸೆಫಾಲಾಸ್ಟ್ರಮ್ ಮತ್ತು ಸ್ಯಾಕ್ಸೇನಿಯಾ ಎಂದು ಗುರುತಿಸಲಾಗಿದೆ.

By

Published : May 27, 2021, 10:27 PM IST

ಡಾ.ಮೆಹುಲ್ ಪಾಂಚಾಲ್
ಡಾ.ಮೆಹುಲ್ ಪಾಂಚಾಲ್

ಸೂರತ್:ಸೂರತ್‌ನಲ್ಲಿ ಮ್ಯೂಕೋರ್ಮೈಕೋಸಿಸ್ ಸೋಂಕಿನ ಹಲವು ರೋಗಿಗಳು ಕಂಡುಬಂದಿದ್ದು, ಸೂರತ್‌ನಲ್ಲಿ ಮಾತ್ರವೇ 200 ವಿವಿಧ ರೂಪಾಂತರಗಳಲ್ಲಿ ಐದು ಮ್ಯೂಕೋರ್ಮೈಕೋಸಿಸ್‌ನ ರೂಪಾಂತರಗಳ ಪತ್ತೆ ಹಚ್ಚಲಾಗಿದೆ.

ಸೂರತ್‌ನಲ್ಲಿ ಕಂಡುಬರುವ ಮ್ಯೂಕಾರ್ಮೈಕೋಸಿಸ್​ನ ಐದು ರೂಪಾಂತರಗಳು ರೈಜೋಪಸ್, ರೈಜೋಮುಕೋರ್, ಅಬ್ಸಿಡಿಯಾ, ಸಿನ್ಸೆಫಾಲಾಸ್ಟ್ರಮ್ ಮತ್ತು ಸ್ಯಾಕ್ಸೇನಿಯಾ ಎಂದು ಗುರುತಿಸಲಾಗಿದೆ.

ಕಿರಣ್ ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಮೈಕ್ರೋಬಯಾಲಜಿಸ್ಟ್ ಡಾ.ಮೆಹುಲ್ ಪಾಂಚಾಲ್ ಮಾತನಾಡಿ, ದೇಶದ ಅನೇಕ ಭಾಗಗಳಲ್ಲಿ ಜನರು ಶಿಲೀಂಧ್ರದಿಂದ ಸೋಂಕಿಗೆ ಒಳಗಾಗಿದ್ದಾರೆ. ಮ್ಯೂಕೋರಿಯಾ ಬಿಳಿ ಶಿಲೀಂಧ್ರವಾಗಿದ್ದು, 200ಕ್ಕೂ ಹೆಚ್ಚು ಬಗೆಯ ವಿಧಗಳನ್ನು ಹೊಂದಿದೆ.

ABOUT THE AUTHOR

...view details