ಅಲ್ಲೂರಿ ಸೀತಾಮರಾಜು (ಆಂಧ್ರ ಪ್ರದೇಶ): ಬುಡಕಟ್ಟು ಕಲ್ಯಾಣ ಆಶ್ರಮ ಶಾಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅಲ್ಲೂರಿ ಸೀತಾಮರಾಜು ಜಿಲ್ಲೆಯಲ್ಲಿ ನಡೆದಿದೆ. ಈ ಘಟನಾವಳಿ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಇಲ್ಲಿನ ಪಾಡೇರು ತಳರಸಿಂಗಿ ಬಾಲಕರ ಆಶ್ರಮ ಶಾಲೆಯಲ್ಲಿ ಇಂದು ಎಂಟನೇ ತರಗತಿ ಓದುತ್ತಿದ್ದ ಧೋನಿ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಇದರಿಂದ ಆಘಾತಗೊಂಡ ಸಂಬಂಧಿಕರು ಹಾಗೂ ವಿದ್ಯಾರ್ಥಿ ಸಂಘದ ಮುಖಂಡರು ಪ್ರತಿಭಟನೆ ಸಹ ನಡೆಸಿದರು. ವಿದ್ಯಾರ್ಥಿಗಳ ಸಾವಿನ ಬಗ್ಗೆ ತನಿಖೆ ನಡೆಸಬೇಕು ಮತ್ತು ಶಾಲಾ ಅಧಿಕಾರಿಗಳು ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ.