ಹೈದರಾಬಾದ್:ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಪಂಚರಾಜ್ಯ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಕೋವಿಡ್ ಮಹಾಮಾರಿ ನಡುವೆ ಪಶ್ಚಿಮ ಬಂಗಾಳದ 292, ತಮಿಳುನಾಡಿನ 234 ಕ್ಷೇತ್ರ, ಕೇರಳದ 140, ಅಸ್ಸೋಂನ 126 ಹಾಗೂ ಪುದುಚೇರಿಯ 30 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಕೊರೊನಾ ಸಂಕಷ್ಟದಲ್ಲೂ ಚುನಾವಣೆ ನಡೆದಿದ್ದ ಕಾರಣ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲು ಕಂಡಿದ್ದರೆ, ಅಸ್ಸೋಂ ಹಾಗೂ ಪುದುಚೇರಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಜೈಲಲ್ಲಿದ್ದುಕೊಂಡೇ ಬಿಜೆಪಿ ವಿರುದ್ಧ ಗೆದ್ದ ರೈತ ಮುಖಂಡ.. ಅಸ್ಸೋಂನಲ್ಲಿ ಹೊಸ ದಾಖಲೆ
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ
ಕೇಂದ್ರ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಅವರ ಪಕ್ಷ ಭರ್ಜರಿ ಜಯ ಸಾಧಿಸಿದೆ. 294 ಕ್ಷೇತ್ರಗಳ ಪೈಕಿ 292 ಸ್ಥಾನಗಳಿಗೆ ಮತದಾನವಾಗಿದ್ದು, ಟಿಎಂಸಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ.
292 ಕ್ಷೇತ್ರಗಳ ಫಲಿತಾಂಶ
ಟಿಎಂಸಿ 212ರಲ್ಲಿ ಗೆಲುವು, 3 ಸ್ಥಾನದಲ್ಲಿ ಮುನ್ನಡೆ
ಬಿಜೆಪಿ 73 ಸ್ಥಾನ ಗೆಲುವು, 2ರಲ್ಲಿ ಮುನ್ನಡೆ
ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು
ಇತರೆ 1 ಕ್ಷೇತ್ರದಲ್ಲಿ ಗೆಲುವು
- ಕೇರಳದಲ್ಲಿ ಗೆದ್ದ ಪಿಣರಾಯಿ ವಿಜಯನ್
140 ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಲಿದ್ದು, 99 ಸ್ಥಾನಗಳಲ್ಲಿ ಎಲ್ಡಿಎಫ್ ಗೆಲುವು ದಾಖಲಿಸಿದೆ. ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿ ಜಯ ಸಾಧಿಸುವಲ್ಲಿ ಸೋತಿದೆ.
ಕೇರಳ 144 ಕ್ಷೇತ್ರದ ಫಲಿತಾಂಶ
ಎಲ್ಡಿಎಫ್ 99 ಸ್ಥಾನದಲ್ಲಿ ಜಯ
ಯುಡಿಎಫ್ 41 ಸ್ಥಾನದಲ್ಲಿ ಗೆಲುವು
ಬಿಜೆಪಿ 0 ಸ್ಥಾನ
- ತಮಿಳುನಾಡಿನಲ್ಲಿ ಸ್ಟಾಲಿನ್ಗೆ ಶುಕ್ರದೆಸೆ