ಪೂಂಚ್ ( ಜಮ್ಮು-ಕಾಶ್ಮೀರ) : ಪೂಂಚ್ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ.. ಓರ್ವ ಜೆಸಿಒ, ನಾಲ್ವರು ಯೋಧರು ಹುತಾತ್ಮ - JCO Among 5 Soldiers Killed In Encounter With Militants In Poonch
ಪೂಂಚ್ ಜಿಲ್ಲೆಯ ಸುರಂಕೋಟೆ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಮತ್ತು ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ.
Poonch
ಸುರಂಕೋಟೆ ಪ್ರದೇಶದ ದಾರಾ ಕಿ ಗಾಲಿ ಸಮೀಪದ ಹಳ್ಳಿಗಳಲ್ಲಿ ಇಂದು ಬೆಳಗ್ಗೆಯಿಂದ ಎನ್ಕೌಂಟರ್ ಆರಂಭವಾಗಿತ್ತು. ಆದರೆ ಉಗ್ರರ ಗುಂಡೇಟಿಗೆ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಹಾಗೂ ನಾಲ್ವರು ಸೈನಿಕರು ವೀರ ಮರಣವನ್ನಪ್ಪಿದ್ದಾರೆ.
ಭಾರತೀಯ ಪಡೆಯಿಂದ ಪ್ರತಿದಾಳಿ ಮುಂದುವರೆದಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.