ಪಾಟ್ನಾ(ಬಿಹಾರ):ಎರಡು ಕುಖ್ಯಾತ ಗ್ಯಾಂಗ್ಗಳ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಐವರು ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕತಿಹಾರ್ ಜಿಲ್ಲೆಯಲ್ಲಿ ಪಿಕು ಯಾದವ್ ಮತ್ತು ಮೋಹನ್ ಠಾಕೂರ್ ಎಂಬಿಬ್ಬರು ರೌಡಿ ಗ್ಯಾಂಗ್ಸ್ಟರ್ಗಳ ಮಧ್ಯೆ ಕಿತ್ತಾಟ ನಡೆಯುತ್ತಿತ್ತು. ತಾವಿರುವ ಪ್ರದೇಶದ ಮೇಲೆ ಅಧಿಪತ್ಯ ಸಾಧಿಸಲು ಉಭಯ ತಂಡದವರು ಆಗಾಗ ಹೊಡೆದಾಡುತ್ತಿದ್ದರು. ಶುಕ್ರವಾರ ಕೂಡ ಗ್ಯಾಂಗ್ಗಳ ಮಧ್ಯೆ ವಾಗ್ವಾದ ನಡೆದಿದೆ.