ಕರ್ನಾಟಕ

karnataka

ETV Bharat / bharat

ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು: ಪೊಲೀಸರಿಂದ ಸಮಗ್ರ ತನಿಖೆ ಆರಂಭ - ಫ್‌ಎಸ್‌ಎಲ್ ತಂಡ

ರಾಜಸ್ಥಾನದ ಬಿಕಾನೇರ್‌ನ ಮುಕ್ತ ಪ್ರಸಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂತ್ಯೋದಯ ನಗರದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Five people of same family dies by suicid
ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು

By ETV Bharat Karnataka Team

Published : Dec 15, 2023, 11:21 AM IST

ಬಿಕಾನೇರ್ (ರಾಜಸ್ಥಾನ): ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಮುಕ್ತಾ ಪ್ರಸಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪತಿ, ಪತ್ನಿ ಹಾಗೂ ಅವರ ಮೂವರು ಮಕ್ಕಳು ಸೇರಿದ್ದಾರೆ. ಈ ಕುರಿತು ಮಾಹಿತಿ ಪಡೆದ ಎಸ್ಪಿ ತೇಜಸ್ವಿನಿ ಗೌತಮ್, ಸ್ಥಳೀಯ ಪೊಲೀಸರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಜೊತೆಗೆ ತನಿಖೆಗಾಗಿ ಎಫ್‌ಎಸ್‌ಎಲ್ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ. ಮೃತರಲ್ಲಿ ಪತಿ - ಪತ್ನಿ ಹಾಗೂ ಅವರ ಇಬ್ಬರು ಗಂಡು ಮಕ್ಕಳು ಮತ್ತು ಹೆಣ್ಣು ಮಗು ಸೇರಿದ್ದಾರೆ. ಸದ್ಯ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ಎಫ್‌ಎಸ್‌ಎಲ್ ತಂಡದೊಂದಿಗೆ ಶ್ವಾನ ದಳವನ್ನೂ ಸ್ಥಳಕ್ಕೆ ಕರೆಸಲಾಗಿದೆ.

''ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಎಂಬುದು ತಿಳಿದಿದೆ. ಸದ್ಯ ವಿಶೇಷ ತಂಡ ಸ್ಥಳದಲ್ಲೇ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿದೆ. ಇದರೊಂದಿಗೆ ಘಟನೆಗೆ ನಿಖರವಾದ ಕಾರಣದ ಬಗ್ಗೆ ಪ್ರಸ್ತುತ ಎಫ್‌ಎಸ್‌ಎಲ್ ತಂಡವು ಘಟನೆಯ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ'' ಎಂದು ಎಂದು ಐಜಿ ಓಂ ಪ್ರಕಾಶ್ ಹೇಳಿದ್ದಾರೆ.

''ಕುಟುಂಬ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬಸ್ಥರು ಆತ್ಮಹತ್ಯೆ ನಿರ್ಧಾರಕ್ಕೆ ಕೈಗೊಂಡಿರುವುದು ಸರಿಯಲ್ಲ. ಮುಕ್ತ ಪ್ರಸಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂತ್ಯೋದಯ ನಗರದ ಬಸ್ತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕುಟುಂಬ ಸದಸ್ಯರು ಯಾವಕ್ಕೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ತಿಳಿದುಬಂದಿಲ್ಲ. ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ'' ಎಂದು ಸಿಒ ಸಿಟಿ ಹಿಮಾಂಶು ತಿಳಿಸಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು:ಈ ಘಟನೆಯಿಂದ ಇಡೀ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಸದ್ಯ ಪೊಲೀಸರು ಸಂಪೂರ್ಣ ತನಿಖೆಯಲ್ಲಿ ನಿರತರಾಗಿದ್ದಾರೆ. ಪೊಲೀಸರು ಎಲ್ಲ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಸೈಡ್ ನೋಟ್ ಕೂಡ ಪತ್ತೆಯಾಗಿದೆ. ಗೇಟ್ ಮುರಿದು ಆತ್ಮಹತ್ಯೆ ಮಾಡಿಕೊಂಡಿರುವ ಮನೆಯೊಳಗೆ ಪೊಲೀಸರು ಪ್ರವೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ವೇಳೆಗೆ ಮನೆಯ ಅಂಗಳದಲ್ಲಿ ವಿಮಲಾ ಹಾಗೂ ಮೂವರು ಮಕ್ಕಳ ಶವ ಪತ್ತೆಯಾಗಿದೆ.

ಘಟನೆ ನಡೆದ ಒಂದು ದಿನದ ನಂತರ ಪೊಲೀಸರಿಗೆ ಮಾಹಿತಿ: ಪೊಲೀಸರು ಸ್ಥಳಕ್ಕಾಗಮಿಸುವುದಕ್ಕೂ ಒಂದು ದಿನ ಮುನ್ನವೇ ಈ ಘಟನೆ ನಡೆದಿತ್ತು. ಏಕೆಂದರೆ, ಚಳಿಗಾಲದ ಕಾರಣ ಶೀತ ಗಾಳಿಯಿಂದಾಗಿ ಮೃತದೇಹದಿಂದ ವಾಸನೆ ಬರಲಿಲ್ಲ. ಆದರೆ, ಒಂದು ದಿನ ಕಳೆದ ನಂತರ ದುರ್ವಾಸನೆ ಹರಡತೊಡಗಿತು. ಅವರ ಪರಿಚಯಸ್ಥರೊಬ್ಬರು ಬಂದಿದ್ದು, ನಂತರ ಯಾರೂ ಮನೆಯ ಗೇಟ್ ತೆರೆಯದೇ ಇರುವ ಕಾರಣಕ್ಕೆ, ಅವರು ಅಲ್ಲಿಂದ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಮರುದಿನ ಹನುಮಾನ್ ಸೋನಿಗೆ ಕರೆ ಮಾಡಿದ್ದಾರೆ. ಫೋನ್ ತೆಗೆಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದಾಗ ಹನುಮಾನ್​ ಸೋನಿ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿರುವ ಗೊತ್ತಾಗಿದೆ. ಎರಡು ದಿನಗಳ ಪತ್ರಿಕೆಗಳು ಮನೆಯಲ್ಲಿ ಆವರಣದಲ್ಲಿ ಬಿದ್ದಿರುವುದು ಕಂಡುಬಂದಿದೆ.

ಇದನ್ನೂ ಓದಿ:ಆತ್ಮಹತ್ಯೆಗೆ ಯತ್ನಿಸಿದ ಮೂವರು ಬಾಲಕಿಯರು: ಬಾಲಕಿ ಸಾವು, ಇಬ್ಬರ ಸ್ಥಿತಿ ಗಂಭೀರ

ABOUT THE AUTHOR

...view details