ಕರ್ನಾಟಕ

karnataka

ETV Bharat / bharat

ಆಟೋರಿಕ್ಷಾ ಮತ್ತು ಟ್ರಕ್ ಡಿಕ್ಕಿ: ಗಂಗಾನದಿಗೆ ಪವಿತ್ರ ಸ್ನಾನ ಮಾಡಲು ಹೊರಟ ಐವರ ದಾರುಣ ಸಾವು - ಪವಿತ್ರ ಸ್ನಾನ ಮಾಡಲು ಹೊರಟ ಐವರ ದಾರುಣ ಸಾವು

ಆಟೋರಿಕ್ಷಾ ಮತ್ತು ಟ್ರಕ್​ ಮುಖಾಮುಖಿ - ಸಹರ್ಸಾ-ಭಾಗಲ್ಪುರ ರಾಜ್ಯ ಹೆದ್ದಾರಿ-58 ರಲ್ಲಿ ಭೀಕರ ಅಪಘಾತ - ಘಟನೆಯಲ್ಲಿ ಐವರು ದುರ್ಮರಣ

road accident
ರಸ್ತೆ ಅಪಘಾತ

By

Published : Mar 13, 2023, 4:27 PM IST

ಮಾಧೇಪುರ (ಬಿಹಾರ):ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಲು ಭಾಗಲ್ಪುರಕ್ಕೆ ತೆರಳುತ್ತಿದ್ದ ಆಟೋರಿಕ್ಷಾಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚೌಸಾ ಪೊಲೀಸ್ ಠಾಣೆ ವ್ಯಾಪ್ತಿಯ ಸಹರ್ಸಾ - ಭಾಗಲ್ಪುರ ರಾಜ್ಯ ಹೆದ್ದಾರಿ - 58ರಲ್ಲಿ ಈ ಘಟನೆ ನಡೆದಿದೆ. ಆಟೋರಿಕ್ಷಾದಲ್ಲಿದ್ದ 9 ಜನರ ಪೈಕಿ ಐವರು ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡು ಚೌಸಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾದವರು ಒಂದೇ ಕುಟುಂಬದ ಸಹರ್ಸಾ ಜಿಲ್ಲೆಯ ದುರ್ಗಾಪುರ ಭಡ್ಡಿ ಗ್ರಾಮದ ನಿವಾಸಿಗಳಾಗಿದ್ದು, ಗಂಗಾದಲ್ಲಿ ಪವಿತ್ರ ಸ್ನಾನ ಮಾಡಲು ಭಾಗಲ್ಪುರಕ್ಕೆ ತೆರಳಿದ್ದು, ಆಟೋರಿಕ್ಷಾದಲ್ಲಿ 9 ಮಂದಿ ಇದ್ದರು. ಎದುರಿಗೆ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಒಂಬತ್ತು ಮಂದಿ ಪ್ರಯಾಣಿಕರನ್ನು ಹೊತ್ತೊಯ್ದು ಬರುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು, ಶವಗಳನ್ನು ಹೊರತೆಗೆಯಲು ಪೊಲೀಸರು ವಾಹನವನ್ನು ಕತ್ತರಿಸಿದ್ದಾರೆ. ಹಾಗೂ ಘಟನೆಯಲ್ಲಿ ರಕ್ತಸ್ರಾವದಿಂದ ತೀವ್ರವಾಗಿ ಗಾಯಗೊಂಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಇನ್ನು ಘಟನೆ ಸಂಭವಿಸಿದ ಸಂದರ್ಭದಲ್ಲಿ ಸ್ಥಳೀಯ ಜನರು ತರಾತುರಿಯಲ್ಲಿ ಎಲ್ಲಾ ಗಾಯಾಳುಗಳನ್ನು ಚೌಸಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಕರೆ ತರುವ ವೇಳೆ ಮೃತಪಟ್ಟ ವ್ಯಕ್ತಿ ಸೇರಿ ಈವರೆಗೆ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಇತರ ನಾಲ್ವರಿಗೆ ಗಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನು ಮಾದೇಪುರದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಎಲ್ಲ ಗಾಯಾಳುಗಳ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ವಿಷಯ ತಿಳಿಯುತಿದಂತಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಾಗೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಾಧೇಪುರದ ಅಸ್ಪತ್ರೆಗೆ ರವಾನಿಸಲಾಗಿದೆ.

ಖಾಸಗಿ ಬಸ್ ಪಲ್ಟಿ ಪ್ರಾಣ ಉಳಿಸಿಕೊಳ್ಳಲು ಪ್ರಯಾಣಿಕರ ಹರಸಹಾಸ :ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಪಲ್ಟಿಯಾಗಿ ಭಾರಿ ದುರಂತ ತಪ್ಪಿರುವ ಘಟನೆ ದಾವಣಗೆರೆ ನಗರದ ಬೇತೂರ ರಸ್ತೆ ಬಳಿ ಇಂದು ನಡೆದಿದೆ. ಅಪಘಾತವಾದ ಬಸ್ ದಾವಣಗೆರೆ ಜಿಲ್ಲೆಯ ಜಗಳೂರಿನ ಮೂಲಕ ಸಾಕಷ್ಟು ಪ್ರಯಾಣಿಕರನ್ನು ಹೊತ್ತು ದಾವಣಗೆರೆ ನಗರಕ್ಕೆ ಆಗಮಿಸುವ ವೇಳೆ ಈ ದುರಂತ ಸಂಭವಿದೆ. ಬಸ್ ಪಲ್ಟಿಯಾಗಿ ಸೇತುವೆ ಮೇಲೆ ಹತ್ತಿದ್ದರಿಂದ ಸಾಕಷ್ಟು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ಸದ್ಯ ಸೇತುವೆ ಮೇಲಿಂದ ಬಸ್​ ಕೆಳಗೆ ಉರಳದೇಹಾಗೇ ನಿಂತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಇನ್ನು ಬಸ್ ಪಲ್ಟಿಯಾಗಿದ್ದ ಪರಿಣಾಮ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಬಸ್ಸಿನ ಗಾಜು ಒಡೆದು ಕಿಟಕಿಯಿಂದ ಜನ ಹೊರಬಂದಿದ್ದಾರೆ. ಈ ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳು ರಸ್ತೆಯಲ್ಲೇ ಕೂತು ಸಹಾಯಕ್ಕಾಗಿ ಅಂಗಲಾಚುತ್ತಿರುವ ಘಟನೆ ಕೂಡ ನಡೆದಿದೆ. ಇನ್ನು ಕೆಲ ಗಾಯಳು ಪ್ರಯಾಣಿಕರ ಆಕ್ರಂಧನ ಮುಗಿಲುಮುಟ್ಟಿತ್ತು. ಆದರೇ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ.

ಇದನ್ನೂ ಓದಿ :ಮೂರು ಪ್ರತ್ಯೇಕ ರಸ್ತೆ ಅಪಘಾತ.. 14 ಜನರ ದುರ್ಮರಣ

ABOUT THE AUTHOR

...view details