ಕರ್ನಾಟಕ

karnataka

ETV Bharat / bharat

ರಕ್ತಸಿಕ್ತ ಸ್ಥಿತಿಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆ.. - ಹರಿಯಾಣದಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆ

ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ ನಿಖರ ಮಾಹಿತಿಗಾಗಿ ತನಿಖೆ ಆರಂಭಿಸಿದ್ದಾರೆ..

Five people from the same family found dead in Haryana
ರಕ್ತಸಿಕ್ತ ಸ್ಥಿತಿಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆ

By

Published : Dec 20, 2021, 12:22 PM IST

ಹಿಸಾರ್(ಹರಿಯಾಣ) :ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯ ಆಗ್ರೋಹ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಆಗ್ರೋಹ ಗ್ರಾಮದ ರಮೇಶ್, ಅವರ ಪತ್ನಿ ಸುನೀತಾ, ಅವರ ಇಬ್ಬರು ಪುತ್ರಿಯರು ಹಾಗೂ ಒಬ್ಬ ಮಗ ಎಂದು ಗುರುತಿಸಲಾಗಿದೆ.

ರಸ್ತೆಯ ಮೇಲೆ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದ ರಮೇಶ್​ನನ್ನು ನೋಡಿದ ಗ್ರಾಮಸ್ಥರು ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದಾರೆ. ಈ ವಿಷಯವನ್ನು ಮುಟ್ಟಿಸಲು ರಮೇಶ್​ ಮನೆಗೆ ಹೋದಾಗ ಅವರ ಪತ್ನಿ ಸುನೀತಾ ಹಾಗೂ ಮೂವರು ಮಕ್ಕಳ ಶವಗಳು ಕೂಡ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದವು.

ಇದನ್ನೂ ಓದಿ:ಮಂಗಳೂರಲ್ಲಿ ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿನಿ‌ ಆತ್ಮಹತ್ಯೆ

ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ ನಿಖರ ಮಾಹಿತಿಗಾಗಿ ತನಿಖೆ ಆರಂಭಿಸಿದ್ದಾರೆ.

For All Latest Updates

ABOUT THE AUTHOR

...view details