ರೇವಾ(ಮಧ್ಯ ಪ್ರದೇಶ): ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ಮದುವೆಗೆ ತೆರಳುತ್ತಿದ್ದ ಮೂವರು ಸಹೋದರರು ನೀರುಪಾಲಾಗಿರುವ ಘಟನೆ ಹರ್ದಹನ್ ಗ್ರಾಮದ ಬಳಿ ನಡೆದಿದೆ.
ಏನಿದು ಘಟನೆ: ಹರ್ದಹನ್ ಗ್ರಾಮದ ಮೂವರು ಸಹೋದರರಾದ 19 ವರ್ಷದ ಸತ್ಯಂ ಕೇವತ್, 20 ವರ್ಷದ ಪವನ್ ಕುಮಾರ್ ಕೇವತ್ ಮತ್ತು 18 ವರ್ಷದ ರಾಮಶಂಕರ್ ಕೇವತ್ ಮದುವೆ ಕಾರ್ಯಕ್ರಮಕ್ಕೆ ಹಾಜರಾಗಲು ಗುರುಗುಡ ಗ್ರಾಮಕ್ಕೆ ಹೋಗುತ್ತಿದ್ದರು. ತಮಸ್ ನದಿ ದಾಟಿ ಪಕ್ಕದ ಗ್ರಾಮಕ್ಕೆ ತೆರಳಬೇಕಾದ ಸ್ಥಿತಿ ಸಹೋದರರಿಗೆ ಎದುರಾಗಿದೆ. ಹೀಗಾಗಿ ಅವರು ತಮ್ಮ ಬೈಕ್ನೊಂದಿಗೆ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದರು.
ಮದುವೆಗೆಂದು ದೋಣಿಯಲ್ಲಿ ತೆರಳುತ್ತಿದ್ದ ಮೂವರು ಸಹೋದರರು ನೀರು ಪಾಲು ಓದಿ:ಸ್ಕೂಬಾ ಡೈವಿಂಗ್‌ಗೆ 20 ಪ್ರವಾಸಿಗರ ಕರೆದೊಯ್ದ ದೋಣಿ ಮುಳುಗಡೆ: ಇಬ್ಬರ ಸಾವು, ನಾಲ್ವರ ಸ್ಥಿತಿ ಗಂಭೀರ
ದೋಣಿಯಲ್ಲಿ ಮೂವರು ಸಹೋದರರನ್ನು ಹೊರತುಪಡಿಸಿ ನಾವಿಕ ಮತ್ತು ಇನ್ನೊಬ್ಬ ಯುವಕ ಪ್ರಯಾಣಿಸುತ್ತಿದ್ದರು. ನದಿಯ ಮಧ್ಯೆದಲ್ಲಿ ದೋಣಿಯ ಸಮತೋಲನ ಕಳೆದುಹೋಗಿದ್ದು, ದೋಣಿ ಪಲ್ಟಿಯಾಗಿದೆ. ದೋಣಿಯಲ್ಲಿದ್ದ ಎಲ್ಲರೂ ನದಿಗೆ ಬಿದ್ದಿದ್ದಾರೆ. ನಾವಿಕ ಮತ್ತು ಇನ್ನೊಬ್ಬ ಯುವಕ ನದಿಯನ್ನು ಈಜಿ ದಡ ಸೇರಿದರು. ಆದರೆ ಮೂವರು ಸಹೋದರರು ನಾಪತ್ತೆಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಈಜುಗಾರರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಮುಂದುವರಿಸಿದರು. ಆದ್ರೆ ನಾಪತ್ತೆಯಾದ ಯುವಕರ ಸುಳಿವು ಸಿಕ್ಕಿರಲಿಲ್ಲ. ರಾತ್ರಿಯಾದ ಹಿನ್ನೆಲೆ ರಕ್ಷಣಾ ಕಾರ್ಯ ಅರ್ಧಕ್ಕೆ ಮೊಟಕುಗೊಳಿಸಿದರು. ಈಗ ಮತ್ತೆ ಮೂವರು ಸಹೋದರರ ಪತ್ತೆ ಕಾರ್ಯ ಮುಂದುವರಿದಿದೆ.