ಮಧ್ಯಪ್ರದೇಶ: ಜಲಪಾತದಲ್ಲಿ ಸಿಲುಕಿ ಐವರು ಸಾವು; ಯುವತಿ ರಕ್ಷಣೆ - ರಾಹತ್‌ಗಢ್ ಜಲಪಾತ ದುರಂತ
15:57 November 17
ಜಲಪಾತದಲ್ಲಿ ಸಿಲುಕಿ ಐವರು ಸಾವು
ಸಾಗರ್(ಮಧ್ಯಪ್ರದೇಶ):ಬಿನಾ ನದಿಯ ರಾಹತ್ಗಢ್ನ ಜಲಪಾತದಲ್ಲಿ ಸಿಲುಕಿ 5 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಲಪಾತಕ್ಕೆ ತೆರಳಿದ್ದ ಆರು ಜನರು ಮುಳುಗಿದ್ದು, ಅದರಲ್ಲಿ ಐವರು ಸಾವನ್ನಪ್ಪಿದ್ದಾರೆ. ಓರ್ವ ಬಾಲಕಿಯನ್ನು ಉಳಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು, ಈಗಾಗಲೇ ಮೂರು ಶವಗಳನ್ನು ಮೇಲೆತ್ತಲಾಗಿದೆ. ಉಳಿದ ಇಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ.
ಮಾಹಿತಿಗಳ ಪ್ರಕಾರ, ರಾಹತ್ಗಢ್ನ ಜಲಪಾತವನ್ನು ಬೈನಾ ನದಿಗೆ ನಿರ್ಮಿಸಲಾಗಿದೆ. ಪಿಕ್ನಿಕ್ಗಾಗಿ ಹೆಚ್ಚಿನ ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಅರಣ್ಯ ಇಲಾಖೆಯು ಈ ಜಲಪಾತದ ಉಸ್ತುವಾರಿ ವಹಿಸಿಕೊಂಡಿದೆ. ಜಲಪಾತದ ಆಳದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.