ಕರ್ನಾಟಕ

karnataka

ETV Bharat / bharat

ನಿಂತಿದ್ದ ಟ್ರಕ್​ಗೆ ಗುದ್ದಿದ ಕಾರು: ಸ್ಥಳದಲ್ಲೇ ಐವರ ದುರ್ಮರಣ - Five of family killed as car rams into truck

ನಿಂತಿದ್ದ ಕಂಟೈನರ್​ ಟ್ರಕ್​ಗೆ ಕಾರೊಂದು ಗುದ್ದಿದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನಡೆದಿದೆ.

ನಿಂತಿದ್ದ ಟ್ರಕ್​ಗೆ ಗುದ್ದಿದ ಕಾರು
ನಿಂತಿದ್ದ ಟ್ರಕ್​ಗೆ ಗುದ್ದಿದ ಕಾರು

By

Published : Oct 24, 2022, 8:22 AM IST

ಬಸ್ತಿ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮುಂಡೇರ್ವಾ ಪ್ರದೇಶದಲ್ಲಿ ನಿಂತಿದ್ದ ಕಂಟೈನರ್ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಮೃತರನ್ನು ಸಂಜೀವ್ ಕುಮಾರ್ (60), ಅಂಕಿತಾ (40), ಅವರ ಮಗ (17), ಮಗಳು (14) ಮತ್ತು ಮತ್ತೋರ್ವ ಮಹಿಳೆ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 28 ರ ಖಾಜೌಲಾ ಪೊಲೀಸ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ಕಂದಕಕ್ಕೆ ಉರುಳಿ ಬಿದ್ದ ಬಸ್​​: ಓರ್ವ ಪ್ರಯಾಣಿಕ ಸಾವು, 58 ಮಂದಿಗೆ ಗಾಯ

ವೇಗವಾಗಿ ಬಂದ ಕಾರು ರಸ್ತೆಬದಿಯಲ್ಲಿ ನಿಂತಿದ್ದ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಕುಟುಂಬವು ಲಖನೌದಿಂದ ಸಂತ ಕಬೀರ್ ನಗರಕ್ಕೆ ತೆರಳುತ್ತಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details