ನಾರಾಯಣಪುರ(ಛತ್ತೀಸ್ಗಡ):ರಾಜ್ಯದಸೋನ್‌ಪುರ ಎಂಬಲ್ಲಿ ನಡೆದಿದ್ದ ಭೀಕರ ಸ್ಫೋಟ ಪ್ರಕರಣ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ನಕ್ಸಲರನ್ನುನಾರಾಯಣಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುಖ್ರಾಮ್ ಕುಮೆತಿ, ನರಸಿಂಗ್ ಪೊಯಮ್, ಸಿಬೊರಮ್ ಪೊಯಮ್, ಗೊಂಚುರಾಮ್ ಪೊಯಮ್ ಮತ್ತು ಮಂಗ್ಲುರಾಮ್ ಪೊಯಮ್ ಎಂದು ಗುರುತಿಸಲಾಗಿದೆ.
4 ದಿನದಲ್ಲಿ 15 ನಕ್ಸಲರು ಅರೆಸ್ಟ್
ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಚಂದ್ರಕರ್, ಕಳೆದ ನಾಲ್ಕು ದಿನಗಳಲ್ಲಿ 15 ಮಂದಿ ನಕ್ಸಲರನ್ನು ಬಂಧಿಸಲಾಗಿದೆ. ಇವರೆಲ್ಲರೂ ಐಇಡಿ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ. ಇಂಡೋ-ಟಿಬೇಟಿಯನ್ ಬಾರ್ಡರ್ನ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಇವರು ನಡೆಸಿದ ದುಷ್ಕೃತ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ಎಲ್ಲಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಛತ್ತೀಸ್ಗಡ ನಕ್ಸಲ್ ದಾಳಿ: ಕೃತ್ಯದ ರೂವಾರಿ ಹಿಡ್ಮಾ ಹಿನ್ನೆಲೆ ಗೊತ್ತಾ?
ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಮುರಲಿ ಟತಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಿಜಾಪುರ ಜಿಲ್ಲೆಯ ನಕ್ಸಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಿಜಾಪುರ ನಿವಾಸಿ ಸುಖ್ರಾಮ್ ಅಲಿಯಾಸ್ ಪಾಂಡು (22) ಎಂದು ಗುರುತಿಸಲಾಗಿದೆ.