ಕರ್ನಾಟಕ

karnataka

ETV Bharat / bharat

ಚುನಾವಣೆ ಹೊಸ್ತಿಲಲ್ಲೇ ದೀದಿಗೆ ಬಿಗ್​ ಶಾಕ್: ಮತ್ತೆ ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ! ​ - TMC MLAs join BJP in West Bengal

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದೆ. ತೃಣಮೂಲ ಕಾಂಗ್ರೆಸ್​ನ ಐವರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

TMC MLAs join BJP in West Bengal
TMC MLAs join BJP in West Bengal

By

Published : Mar 8, 2021, 5:47 PM IST

Updated : Mar 8, 2021, 6:23 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್​​ ಆಗಿದ್ದು, ಭಾರತೀಯ ಜನತಾ ಪಾರ್ಟಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ತೃಣಮೂಲ ಕಾಂಗ್ರೆಸ್​ನ ಐವರು ಶಾಸಕರು ಇದೀಗ ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದಾರೆ. ಶಾಸಕರಾದ ಸೋನಾಲಿ ಗುಹಾ, ದೀಪೆಂದು ಬಿಸ್ವಾಸ್​, ರವೀಂದ್ರನಾಥ್​ ಭಟ್ಟಾಚಾರ್ಯ, ಜತು ಲಾಹಿರಿ ಹಾಗೂ ಸರಲಾ ಮುರ್ಮು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್​ ಹಾಗೂ ಸುವೇಂದು ಅಧಿಕಾರಿ ಸಮ್ಮುಖದಲ್ಲಿ ಇವರು ಕಮಲ ಮುಡಿದಿದ್ದಾರೆ.

ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲು ಹಾಗೂ ತದನಂತರ ಅನೇಕ ತೃಣಮೂಲ ಕಾಂಗ್ರೆಸ್ ಶಾಸಕರು, ಸಚಿವರು ಹಾಗೂ ಪ್ರಮುಖರು ಬಿಜೆಪಿ ಸೇಪರ್ಡೆಗೊಳ್ಳುತ್ತಿದ್ದಾರೆ.

ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿ ಹಾಗೂ ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​ ಮಾಡಿದೆ. ಪ್ರಮುಖವಾಗಿ ಟಿಎಂಸಿ ಕೆಲ ಶಾಸಕರು ಹಾಗೂ ಸಚಿವರಿಗೆ ಟಿಕೆಟ್​ ನೀಡಿಲ್ಲ. ಹೀಗಾಗಿ ಅವರು ಬಿಜೆಪಿ ಸೇರಿ ವಿವಿಧ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ.

Last Updated : Mar 8, 2021, 6:23 PM IST

ABOUT THE AUTHOR

...view details