ಗುಜರಾತ್: ಗಿರ್ ಕಾಡಿನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಹೊಡೆದುರುಳಿಸುವ, ಬಲೆಗೆ ಬೀಳಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಅರಣ್ಯ ಇಲಾಖೆ 5 ಮಂದಿಯನ್ನು ಬಂಧಿಸಿದೆ.
ಜುನಾಗಢ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್.ಕೆ. ಬೆರ್ವಾಲ್ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಈ ಕುರಿತು ಮಾತನಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಂಗಾರ್ಪುರ್ ಗ್ರಾಮದ ಆರೋಪಿ, ಕೆಲವು ವರ್ಷಗಳ ಹಿಂದೆ ಬಲೆ ಬಳಸಿ ಸಿಂಹದ ಮರಿಯನ್ನು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.
ಮತ್ತೋರ್ವ ಅಧಿಕಾರಿಯ ಪ್ರಕಾರ, ಇತರೆ ನಾಲ್ಕು ಬೇಟೆಗಾರರನ್ನು ಈ ಪ್ರದೇಶದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ. ಇನ್ನೂ ನಾವು ಈ ವಾರದಲ್ಲಿ ಹಲವಾರು ಶಂಕಿತ ಕಳ್ಳ ಬೇಟೆಗಾರರನ್ನು ಬಂಧಿಸಿದ್ದೇವೆಂದು ತಿಳಿಸಿದರು.