ನವದೆಹಲಿ: ಪಶ್ಚಿಮ ವಿಹಾರದ ಪಶ್ಚಿಮ ಪ್ರದೇಶದಲ್ಲಿ ಮೇ. 20 ರಂದು 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಐವರು ಅಪ್ರಾಪ್ತರು ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ದೆಹಲಿಯನ್ನು ತೊರೆಯಲು ಸಿದ್ಧತೆ ನಡೆಸಿದ್ದ ಮೂವರನ್ನೂ ಬಂಧಿಸಲಾಗಿದೆ. ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಐಪಿಸಿಯ ಸೆಕ್ಷನ್ 354, 354B, 341, 376DA, ಮತ್ತು 6/17/21 ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿ, ಶುಕ್ರವಾರ ರಾತ್ರಿ ಸಣ್ಣ ಸಿಲಿಂಡರ್ಗೆ ಗ್ಯಾಸ್ ತುಂಬಿಸಲು ಆ ಪ್ರದೇಶದ ರೈಲ್ವೆ ಗೇಟ್ನಲ್ಲಿರುವ ಅಂಗಡಿಯೊಂದಕ್ಕೆ ಹೋಗಿದ್ದಳು. ಆಗ ಆರೋಪಿಗಳಲ್ಲಿ ಒಬ್ಬನು ಬಾಲಕಿಯನ್ನು ರೈಲ್ವೆ ಹಳಿ ಬದಿಗೆ ಕರೆದೊಯ್ದಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.