ಕರ್ನಾಟಕ

karnataka

ETV Bharat / bharat

ಒಂದೇ ಕುಟುಂಬದ ಐವರ ನಿಗೂಢ ಸಾವು.. ಕಾರಣ? - ಕುಟುಂಬದ ಐವರು ನಿಗೂಢ ಸಾವು

ಕೇರಳದಲ್ಲಿ ಒಂದೇ ಕುಟುಂಬದ ಐವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಿರುವನಂಪುರದಲ್ಲಿ ಒಂದೇ ಕುಟುಂಬದ ಐವರ ನಿಗೂಢ ಸಾವು
ತಿರುವನಂಪುರದಲ್ಲಿ ಒಂದೇ ಕುಟುಂಬದ ಐವರ ನಿಗೂಢ ಸಾವು

By

Published : Jul 2, 2022, 11:37 AM IST

ತಿರುವನಂತಪುರಂ(ಕೇರಳ):ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಹಿರಿಯ ನೇಣು ಬಿಗಿದುಕೊಂಡಿದ್ದರೆ, ಉಳಿದವರು ವಿಷ ಕುಡಿದು ಮೃತಪಟ್ಟಿದ್ದಾರೆ.

ತಿರುವನಂತಪುರ ಜಿಲ್ಲೆಯ ಚತ್ತನ್​ಪಾರಾ ಎಂಬಲ್ಲಿ ವಾಸಿಸುತ್ತಿದ್ದ ಕುಟುಂಬಸ್ಥರು ಗೂಡಂಗಡಿ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಪಂಚಾಯಿತಿ ಅಧಿಕಾರಿಗಳು ಅಂಗಡಿ ಮುಚ್ಚಿಸಿದ್ದರು. ಸಾಲದ ಸುಳಿಗೆ ಸಿಲುಕಿದ್ದ ಕುಟುಂಬಸ್ಥರು ಇದರಿಂದ ನೊಂದಿದ್ದರು.

ಖಿನ್ನತೆಗೆ ಒಳಗಾಗಿದ್ದ ಕುಟುಂಬಸ್ಥರು ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದಾರೆ. ಇಡೀ ಕುಟುಂಬಸ್ಥರು ಮನೆಯಿಂದ ಹೊರಬಾರದೇ ಇದ್ದಾಗ ನೆರೆಹೊರೆಯವರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಪೊಲೀಸರು ಮನೆಹೊಕ್ಕು ಪರಿಶೀಲಿಸಿದಾಗ ಐವರೂ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕುಟುಂಬವು ಸಾಲದ ಸಮಸ್ಯೆಗೀಡಾಗಿತ್ತು ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ನಿಗೂಢ ಸಾವಿಗೆ ಇದೇ ಕಾರಣವಿರಬಹುದು ಎಂದು ಹೇಳಲಾಗಿದೆ.

ಓದಿ:ಬೆಳಗಾವಿ: ಮಲಗಿರುವ ರೀತಿಯಲ್ಲಿ ವ್ಯಕ್ತಿಯ ಅಸ್ತಿಪಂಜರ ಪತ್ತೆ!

ABOUT THE AUTHOR

...view details