ಕರ್ನಾಟಕ

karnataka

ETV Bharat / bharat

ಮನೆಯ ಛಾವಣಿ ಕುಸಿದು ಒಂದೇ ಕುಟುಂಬದ ಐವರ ಸಾವು.. ನೋಯ್ಡಾ ಲಿಫ್ಟ್​ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ - ಮನೆ ಛಾವಣಿ ಕುಸಿತ ಪ್ರಕರಣ

ಮನೆಯ ಛಾವಣಿ ಕುಸಿದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದಾರುಣ ಘಟನೆ ಲಖನೌದಲ್ಲಿ ನಡೆದಿದೆ.

ಮನೆಯ ಮೇಲ್ಛಾವಣೆ ಕುಸಿದು ಒಂದೇ ಕುಟುಂಬದ ಐವರು ಸಾವು
ಮನೆಯ ಮೇಲ್ಛಾವಣೆ ಕುಸಿದು ಒಂದೇ ಕುಟುಂಬದ ಐವರು ಸಾವು

By ETV Bharat Karnataka Team

Published : Sep 16, 2023, 11:42 AM IST

Updated : Sep 16, 2023, 12:32 PM IST

ಲಖನೌ (ಉತ್ತರಪ್ರದೇಶ): ಉತ್ತರಪ್ರದೇಶದ ಲಖನೌ ಜಿಲ್ಲೆಯಲ್ಲಿ ಮನೆಯೊಂದರ ಛಾವಣಿ ಕುಸಿದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಇಲ್ಲಿಯ ಆನಂದನಗರದ ಓಲ್ಡ್​​ ರೈಲ್ವೆ ಕಾಲೋನಿ ಪ್ರದೇಶದಲ್ಲಿ ಇಂದು ಬೇಳಗಿನ ಜಾವ ಮನೆಯ ಛಾವಣೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರೋಜಿನಿ ದೇವಿ (35), ಸತೀಶ್ ಚಂದ್ರ (40), ಹರ್ಷಿತಾ (10), ಹರ್ಷಿತ್ (13) ಮತ್ತು ಅಂಶ್ (5) ಮೃತರು ಎಂದು ಗುರುತಿಸಲಾಗಿದೆ. ಎನ್​​ಡಿಆರ್​ಎಫ್​ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿ ಐವರನ್ನು ಹೊರತೆಗೆದಿದ್ದಾರೆ.

ಘಟನೆ ಬಗ್ಗೆ ಲಖನೌ ಪೂರ್ವ ವಿಭಾಗದ ಡಿಸಿಪಿ ಹೃದೇಶ್​ ಕುಮಾರ್​ ಮಾಧ್ಯಮದೊಂದಿಗೆ ಮಾತನಾಡಿ, ಓಲ್ಡ್​ ರೈಲ್ವೆ ಕಾಲನಿಯಲ್ಲಿ ಬೆಳಗಿನ ಜಾವ 4 - 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಈ ಬಗ್ಗೆ ತಿಳಿದ ಕೂಡಲೇ ಪೊಲೀಸರು ಮತ್ತು ಎನ್​ಡಿಆರ್​ಎಫ್​ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಸಿಲುಕಿದ್ದ ಐವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಐವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಡಿಸಿಪಿ ಹೇಳಿದರು.

ಲಿಫ್ಟ್​ ಕುಸಿತ ಪ್ರಕರಣ:ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನಿನ್ನೆ ನಿರ್ಮಾಣ ಹಂತದಲ್ಲಿನ ಕಟ್ಟಡದ ಲಿಫ್ಟ್​ ಕುಸಿದು 4 ಜನ ಕಾರ್ಮಿಕರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೇ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಶುಕ್ರವಾರ ಲಿಫ್ಟ್​ ಕುಸಿದು ಬಿದ್ದಿತ್ತು. ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ನಾಲ್ವರು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಸೆಕ್ಟರ್ 150 ಭಗತ್ ಸಿಂಗ್ ಪಾರ್ಕ್ ಬಳಿ ಎಎಸ್ ಗ್ರೂಪ್‌ನ ಸ್ಪಾರ್ಕ್ ನ್ಯೂ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ. ನಿರ್ಮಾಣವಾಗುತ್ತಿದ್ದ ಈ ಕಟ್ಟಡದಲ್ಲಿ ಸ್ಪಾರ್ಟನ್ ಕಂಪನಿಯಿಂದ ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಥೈಸೆನ್ ಕಂಪನಿಯ ಶಾಶ್ವತ ಲಿಫ್ಟ್ ಅನ್ನು ಸ್ಥಾಪಿಸಿದ ನಂತರ, ತಾತ್ಕಾಲಿಕ ಲಿಫ್ಟ್ ಅನ್ನು ತೆಗೆದುಹಾಕಲಾಗುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಕಾರ್ಮಿಕರು ನೆಲ ಮಹಡಿಯಿಂದ 14ನೇ ಮಹಡಿಗೆ ಲಿಫ್ಟ್​ನಲ್ಲಿ ಹೋಗುತ್ತಿದ್ದರು ಈ ವೇಳೆ ಲಿಫ್ಟ್​ ಕುಸಿದುಬಿದ್ದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮನೆಮುಂದೆ ಮಲಗಿದ್ದ ದಂಪತಿ ಹತ್ಯೆ ಮಾಡಿದ ದುಷ್ಕರ್ಮಿ.. ರೊಚ್ಚಿಗೆದ್ದ ಗ್ರಾಮಸ್ಥರಿಂದ ಆರೋಪಿಯ ಹತ್ಯೆ

Last Updated : Sep 16, 2023, 12:32 PM IST

ABOUT THE AUTHOR

...view details