ಕರ್ನಾಟಕ

karnataka

ETV Bharat / bharat

ಸರ್ಕಾರಿ ಸೌಲಭ್ಯಗಳಿಗೆ ಆಕರ್ಷಿತರಾಗಿ ಪೊಲೀಸರಿಗೆ ಶರಣಾದ ಐವರು ನಕ್ಸಲರು! - Andra police

ಸರ್ಕಾರ ನೀಡುವ ಸೌಲಭ್ಯಗಳಿಗೆ, ಯೋಜನೆಗಳಿಗೆ ಆಕರ್ಷಿತರಾಗಿ ಸರೆಂಡರ್​ ಆಗುತ್ತಿದ್ದಾರೆ. ಸಾಮಾನ್ಯ ಜೀವನ ನಡೆಸಲು ಮುಂದಾಗುತ್ತಿದ್ದಾರೆ..

Five Maoists militia members surrenders in Visakhapatnam
ಪೊಲೀಸರಿಗೆ ಶರಣಾದ ಐವರು ನಕ್ಸಲರು

By

Published : Nov 29, 2020, 5:26 PM IST

ವಿಶಾಖಪಟ್ಟಣಂ :ಆಂಧ್ರಪ್ರದೇಶ ಪೊಲೀಸರಿಗೆ ಮತ್ತೆ ಐವರು ಮಾವೋವಾದಿಗಳು ಶರಣಾಗಿದ್ದು, ಒಂದು ತಿಂಗಳಲ್ಲಿ 13 ನಕ್ಸಲರು​ ಸರೆಂಡರ್​ ಆದಂತಾಗಿದೆ.

ಆಂಧ್ರದ ವಿಶಾಖಪಟ್ಟಣಂನ ಚಿಂತಪಲ್ಲಿ ಪ್ರದೇಶದ ಮತ್ಸ್ಯರಾಜು, ಸನ್ಯಾಸಿ ರಾವ್, ಹರಿ, ಭಗತ್ ರಾಮ್ ಮತ್ತು ಪೂರ್ಣಚಂದರ್ ಶರಣಾದ ನಕ್ಸಲರಾಗಿದ್ದಾರೆ ಎಂದು ಚಿಂತಪಲ್ಲಿ ಎಎಸ್ಪಿ ವಿದ್ಯಾಸಾಗರ್ ನಾಯ್ಡು ತಿಳಿಸಿದ್ದಾರೆ.

ಇವರು ಸರ್ಕಾರ ನೀಡುವ ಸೌಲಭ್ಯಗಳಿಗೆ, ಯೋಜನೆಗಳಿಗೆ ಆಕರ್ಷಿತರಾಗಿ ಸರೆಂಡರ್​ ಆಗುತ್ತಿದ್ದಾರೆ. ಸಾಮಾನ್ಯ ಜೀವನ ನಡೆಸಲು ಮುಂದಾಗುತ್ತಿದ್ದಾರೆ ಎಂದು ವಿದ್ಯಾಸಾಗರ್ ಹೇಳಿದ್ದಾರೆ.

ABOUT THE AUTHOR

...view details